ಕೆಲವು ವಿದ್ಯಾರ್ಥಿಗಳು ಸಮಯ ಕಳೆಯಲು ತಮ್ಮ ನೆಚ್ಚಿನ ಉತ್ತರಗಳನ್ನು ಪರೀಕ್ಷಗೆ ನೀಡಿರುವ ಉತ್ತರ ಪತ್ರಿಕೆಗಳ ಮೇಲೆಯೇ ಗೀಚುತ್ತಾರೆ. ಉತ್ತರ ಸಮಂಜಸ ಅಲ್ಲದಿರಬಹುದು ಅದರೂ ನೆನಪಿನಲ್ಲಿ ಉಳಿಯುವಂತಹ ಉತ್ತರಗಳಾಗಿರುತ್ತವೆ. ಕೆಲ ಸಮಯದ ಹಿಂದೆ ಅಲ್ಲು ಅರ್ಜುನ್ ಅವರು ‘ಪುಷ್ಪ: ದಿ ರೈಸ್’ ಚಿತ್ರದಲ್ಲಿ ಪುಷ್ಪಾ.. ಪುಷ್ಪಾ ರಾಜ್ ಎಂದು ಬರೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಚಿತ್ರ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಆದರೆ ಇದೀಗ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮದುವೆಯ ಬಗ್ಗೆ ವಿಚಿತ್ರ ವ್ಯಾಖ್ಯಾನ ನೀಡಿದ್ದಾಳೆ. ಇದನ್ನು ನೋಡಿದರೆ ಯಾರಪ್ಪಾ ಈ ಬಾಲೆ ಎಂದು ನೀವು ಯೋಚಿಸುತ್ತೀರಿ/ಮುಸಿಮನುಸಿ ನಗುತ್ತೀರಿ.
ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಅಧ್ಯಯನ ಮಾಡಲು ತುಂಬಾ ಆಸಕ್ತಿ ಹೊಂದಿದ್ದರೆ, ಕೆಲವು ವಿದ್ಯಾರ್ಥಿಗಳು ತುಂಬಾ ಚಾಣಾಕ್ಷರು. ಬುದ್ಧಿವಂತರೂ ಆಗಿಗಿರುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಾಮಾನ್ಯ ಬುದ್ಧಿವಂತಿಕೆಯನ್ನು ಹೊಂದಿದ್ದರೂ ತಮ್ಮ ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಮನಸ್ಸಿಟ್ಟು ಅಧ್ಯಯನ ಮಾಡುವುದಿಲ್ಲ. ಆದರೆ ಅಂತಹ ವಿದ್ಯಾರ್ಥಿಗಳ ಹೃದಯ ಎಲ್ಲೆಲ್ಲೋ ಓಡಾಡುತ್ತಿರುತ್ತದೆ/ ಏನನ್ನೋ ಜಾಲಾಡುತ್ತಿರುತ್ತದೆ.
ಅಂತಹ ಉತ್ತರ ಸದ್ಯ ಅಂತರ್ಜಾಲದಲ್ಲಿ ಜಾಲಾಡುತ್ತಿದೆ. ಅದೀಗ ವೈರಲ್ ಆಗಿದೆ. ಇದನ್ನು ನೋಡಿದರೆ ನಗು ಬರುತ್ತದೆ.. ಆ ವಿದ್ಯಾರ್ಥಿನಿ ಅದೆಷ್ಟು ತಮಾಷೆಯಾಗಿ ಬರೆದಿದ್ದಾರೆ ಗೊತ್ತಾ… ಶಾಲೆ/ ಕಾಲೇಜು ಸೇರಿದ ಸ್ಟೂಡೆಂಟುಗಳಿಗೆ ವರ್ಷ ಆರಂಭವಾಗುತ್ತಿದ್ದಂತೆ ಹಲವು ಯೂನಿಟ್ ಟೆಸ್ಟ್ಗಳು, ತ್ರೈಮಾಸಿಕ, ಅರ್ಧ ವರ್ಷದ ಪರೀಕ್ಷೆಗಳು ಬರುತ್ತಲೇ ಇರುತ್ತವೆ. ಯಾವುದೇ ವಿದ್ಯಾರ್ಥಿಯಾಗಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮತ್ತು ಉತ್ತಮ ಅಂಕಗಳನ್ನು ಪಡೆಯಲು ಬಯಸುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳು ಸಮಯ ಕಳೆಯಲು ತಮಗಿಷ್ಟ ಬಂದ, ತಮ್ಮ ನೆಚ್ಚಿನ ಉತ್ತರಗಳನ್ನು ಆನ್ಸರ್ ಪೇಪರ್ ಮೇಲೆ ಗೀಚುತ್ತಾರೆ. ಇವು ನೆನಪಿನಲ್ಲಿ ಉಳಿಯುತ್ತವೆ.
What is marriage? 😂 pic.twitter.com/tM8XDNd12P
— Paari | Panchavan Paarivendan (@srpdaa) October 11, 2022
ಮದುವೆಯ ವ್ಯಾಖ್ಯಾನವೇನು ಎಂಬುದಕ್ಕೆ ಈ ವಿದ್ಯಾರ್ಥಿನಿಯ ಉತ್ತರ ನಗು ತರಿಸುತ್ತದೆ. ಅದು ಹೀಗಿದೆ:
ಮದುವೆಯೆಂದರೆ ಅದು.. ಈಗ ನೀನು ದೊಡ್ಡವನಾಗಿದ್ದೀಯ. ಇಷ್ಟು ವರ್ಷ ನಿನ್ನನ್ನು ಸಾಕಿದ್ದೆವು.. ಇನ್ನು ನಮ್ಮಿಂದ ಆಗೋಲ್ಲ ಎನ್ನುತ್ತಾರೆ ಬಾಲಕಿಯ ಪೋಷಕರು. ನಂತರ ಹುಡುಗನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಹುಡುಗಿಯ ಪೋಷಕರು ತಮ್ಮ ಮಗಳನ್ನು ಮದುವೆ ಮಾಡಿಕೊಟ್ಟು, ತಮ್ಮ ಮಗಳನ್ನು ಬೆಳೆಸುವ ಪುರುಷನನ್ನು ಹುಡುಕುತ್ತಾರೆ. ನಂತರ ಹುಡುಗಿ ಮತ್ತು ಹುಡುಗ ಭೇಟಿಯಾಗುತ್ತಾರೆ. ತಂದೆ-ತಾಯಿ ನಿಶ್ಚಯಿಸಿದವರನ್ನೇ ಮಗಳು ಮದುವೆಯಾಗುತ್ತಾಳೆ ಎಂದು ಮನದಾಳದ ಭಾವನೆಗಳನ್ನು ಪ್ರಸ್ತುತಪಡಿಸಿದ್ದಾಳೆ. ವಿದ್ಯಾರ್ಥಿನಿ ಬರೆದ ಉತ್ತರ ಶಿಕ್ಷಕರು ನಿರುತ್ತರರಾಗಿದ್ದಾರೆ. ಆದರೆ ಅವಳ ಉತ್ತರ ಪತ್ರಿಕೆಯನ್ನು ಅಡ್ಡಲಾಗಿ ಹೊಡೆದು, ಶೂನ್ಯ ಅಂಕಗಳನ್ನು ದಯಪಾಲಿಸಿದ್ದಾರೆ.
ಈ ಚಿತ್ರವನ್ನು @srpdaa ಖಾತೆಯಿಂದ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ ಈ ಪೋಸ್ಟ್ ಗೆ ನಾನಾ ಕಾಮೆಂಟ್‌ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.