ಪ್ರೀತಿಗೆ ಮನೆಯವರೇ ಅಡ್ಡಿ ಎಂದು ತಿಳಿದು ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಸ್ನೇಹ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಈ ವೇಳೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರೀತಿ ವಿಷಯ ತಿಳಿದು ಅಜ್ಜಿ ಮನೆಗೆ ಶಿಪ್ಟ್ ಮಾಡಿದ್ದ ಪೋಷಕರು
ಆಗಸ್ಟ್ 16 ರಂದು ಕಾಲೇಜಿನಿಂದಲೇ ಸ್ನೇಹ, ಯುವಕನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ದಿನಗಳ ಬಳಿಕ ಜೋಡಿಯನ್ನು ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದರು. ಆ ಬಳಿಕ ಯುವತಿ ಪೋಷಕರು ಸ್ನೇಹಳನ್ನು ನೆಲಮಂಗಲದಿಂದ ಅಜ್ಜಿ ಮನೆಗೆ ಕಳುಹಿಸಿದ್ದರು. ಇದಾದ ಕೆಲ ತಿಂಗಳು ಬೇರೆ ಬೇರೆಯಾಗಿದ್ದ ಸಂತೋಷ್ ಮತ್ತು ಯುವತಿ ಸ್ನೇಹ. ಇದೀಗ ಎರಡು ತಿಂಗಳ ಬಳಿಕ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.