ಪ್ರೀತಿಗೆ ಮನೆಯವರ ವಿರೋಧ; ಮನನೊಂದ ಯುವತಿ ನೇಣಿಗೆ ಶರಣು

ಶೇರ್ ಮಾಡಿ

ಪ್ರೀತಿಗೆ ಮನೆಯವರೇ ಅಡ್ಡಿ ಎಂದು ತಿಳಿದು ಯುವತಿಯೋರ್ವಳು ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಸ್ನೇಹ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ನೆಲಮಂಗಲ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದು, ಈ ವೇಳೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಪ್ರೀಯಕರ ಸಂತೋಷ್ ಎಂಬಾತನನ್ನು​ ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಮನೆಯವರು ವಿರೋಧ ಪಡಿಸಿದ ಹಿನ್ನಲೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರೀತಿ ವಿಷಯ ತಿಳಿದು ಅಜ್ಜಿ ಮನೆಗೆ ಶಿಪ್ಟ್​ ಮಾಡಿದ್ದ ಪೋಷಕರು
ಆಗಸ್ಟ್​ 16 ರಂದು ಕಾಲೇಜಿನಿಂದಲೇ ಸ್ನೇಹ, ಯುವಕನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ದಿನಗಳ ಬಳಿಕ ಜೋಡಿಯನ್ನು ಪೊಲೀಸರು ಮಂಡ್ಯದಲ್ಲಿ ಪತ್ತೆ ಹಚ್ಚಿದರು. ಆ ಬಳಿಕ ಯುವತಿ ಪೋಷಕರು ಸ್ನೇಹಳನ್ನು ನೆಲಮಂಗಲದಿಂದ ಅಜ್ಜಿ ಮನೆಗೆ ಕಳುಹಿಸಿದ್ದರು. ಇದಾದ ಕೆಲ ತಿಂಗಳು ಬೇರೆ ಬೇರೆಯಾಗಿದ್ದ ಸಂತೋಷ್​ ಮತ್ತು ಯುವತಿ ಸ್ನೇಹ. ಇದೀಗ ಎರಡು ತಿಂಗಳ ಬಳಿಕ ಅಜ್ಜಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

error: Content is protected !!