ನೆಲ್ಯಾಡಿಯ ಮದ್ರಸವೊಂದರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದನ್ವಯ ನ್ಯಾಯಲಯದ ನಿರ್ದೇಶನದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.07ರಂದು ಪ್ರಕರಣ ದಾಖಲುಗೊಂಡಿದೆ.
ಜಿ.ಎಚ್. ಮುಹಮ್ಮದ್ ಸುಹೈಲ್(19) ವಿದ್ಯಾರ್ಥಿಯ ಮೇಲೆ ಸೆ.28 ರಂದು ಈದ್ಮಿಲಾದ್ ಪ್ರಯುಕ್ತ ಮಸೀದಿಗೆ ಹೋಗಿದ್ದು ಸಂಜೆ 4.00 ಗಂಟೆಯ ಸಮಯಕ್ಕೆ ಉಮ್ಮರಬ್ಬ(65), ಉಸ್ಮಾನ್ (25), ಅಬ್ದುಲ್ಲಾ(35), ರಫೀಕ್(35), ಶಾಕೀರ(35), ಶಕೀಲ್(30) ಎಂಬವರು ಮದ್ರಸ ಕೊಠಡಿಯಲ್ಲಿ ಬಲತ್ಕಾರವಾಗಿ ಕೂಡಿ ಹಾಕಿ ಬೈದು ಹಲ್ಲೆ ನಡೆಸಿದ್ದಾರೆಂದೂ, ಹಲ್ಲೆಗೊಳಗಾದವ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿರುವೆನೆಂದು ಆರೋಪಿಸಿ ಪುತ್ತೂರು ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.
ಈ ಬಗ್ಗೆ ನ್ಯಾಯಾಲಯವು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಉಪ್ಪಿನಂಗಡಿ ಪೊಲೀಸರಿಗೆ ನಿರ್ದೇಶನವನ್ನು ನೀಡಿತ್ತು. ಅದರಂತೆ ಶನಿವಾರ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.