ಬೈಕಿಗೆ ಕಾರು ಢಿಕ್ಕಿ: ಬೈಕ್ ಸವಾರರಿಬ್ಬರು ಗಂಭೀರ

ಶೇರ್ ಮಾಡಿ

ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಣ್ಣೀರುಬಾವಿ ಬೀಚ್ ಬಳಿ ಶನಿವಾರ ರಾತ್ರಿ ನಡೆದಿದೆ.

ಗಾಯಗೊಂಡವರನ್ನು ಬೆಂಗರೆ ನಿವಾಸಿ ನಝೀರ್ ಎಂಬವರ ಮಗ ಮೊಯ್ದಿನ್ ನಾಝಿಮ್ ಮತ್ತು ಅವರ ಸ್ನೇಹಿತ ಸಾಲೆತ್ತೂರು ನಿವಾಸಿ ಅನಸ್ ಎಂದು ತಿಳಿದು ಬಂದಿದೆ.ಗಂಭೀರ ಗಾಯಗೊಂಡಿರುವ ಇವರಿಬ್ಬರನ್ನು ನಗರದ ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಅಪಘಾತ ನಡೆಸಿ ವಾಹನದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
%d