ಇಬ್ಬರು ಅನ್ಯಕೋಮಿನ ಯುವಕರ ಸಹಿತ ಓರ್ವ ಹಿಂದೂ ಯುವತಿ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ನಡೆದಿದೆ.
ಆರಂಭದಲ್ಲಿ ಈ ಮೂವರು ಬಸ್ಸೊಂದರಲ್ಲಿ ಬಂದು ಕುದ್ದುಪದವಿನಲ್ಲಿ ಬಸ್ಸಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು. ಈ ವೇಳೆ ಸ್ಥಳೀಯರು ಅವರನ್ನು ವಿಚಾರಿಸಿದಾಗ ಉಪ್ಪಳ ಕಡೆ ತೆರಳುವ ಇನ್ನೊಂದು ಬಸ್ಸಿನಲ್ಲಿ ಆ ಮೂವರು ಅಲ್ಲಿಂದ ತೆರಳಿ ಪೆರುವಾಯಿಯಲ್ಲಿ ಬಸ್ಸಿಂದಿಳಿದು ಅಲ್ಲೇ ಪಕ್ಕದಲ್ಲಿರುವ ಬಸ್ಸು ತಂಗುದಾಣದಾಣದಲ್ಲಿ ಕುಳಿತಿದ್ದರು. ಮಾತ್ರವಲ್ಲದೆ ಆ ಮೂವರು ತುಂಬಾ ಸಲುಗೆಯಿಂದ ಇರುವುದನ್ನು ಕಂಡ ಸ್ಥಳೀಯರು ಅವರನ್ನು ವಿಚಾರಿಸಿ ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಮೂವರೂ ವಿದ್ಯಾರ್ಥಿಗಳಾಗಿದ್ದು, ಪೆರ್ಲ ಆಸುಪಾಸಿನವರಾಗಿದ್ದು, ಸುತ್ತಾಡಲು ಬಂದಿರುವುದಾಗಿ ಅವರು ಪೊಲೀಸರಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.