ರೌಡಿಗಳ ಪರೇಡ್‌: 262 ಮಂದಿಗೆ ನಗರ ಪೊಲೀಸ್ ಆಯುಕ್ತರ ವಾರ್ನಿಂಗ್

ಶೇರ್ ಮಾಡಿ

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಮಂಗಳೂರು ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್‌ ನಡೆಸಲಾಯಿತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ನೇತೃತ್ವದಲ್ಲಿ ನಡೆದ ಪರೇಡ್‌ನಲ್ಲಿ 262 ಸಕ್ರೀಯ ರೌಡಿಗಳನ್ನು ಸಂಬಂಧಪಟ್ಟ ಎಸಿಪಿರವರು ಪೊಲೀಸ್ ಆಯುಕ್ತರ ಮುಂದೆ ಹಾಜರುಪಡಿಸಿದರು.

ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕೆಂದು ಪೊಲೀಸ್ ಆಯುಕ್ತರು ಉಪದೇಶಿಸಿ, ಇನ್ನು ಮುಂದೆ ಯಾವುದಾದರೂ ಅಪಾರಾಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರ ಮೇಲೆ ಕಾನೂನು ರೀತಿಯ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಪರೇಡ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ ಗೋಯಲ್(ಐಪಿ.ಎಸ್), ಅಪರಾಧ ಮತ್ತು ಸಂಚಾರ ಡಿಸಿಪಿ ಬಿಪಿ ದಿನೇಶ್ ಕುಮಾರ್, ನಗರದ ಎಲ್ಲಾ ಎಸಿಪಿಗಳು ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು ಉಪಸ್ಥಿತರಿದ್ದರು.

Leave a Reply

error: Content is protected !!