SSLC ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಶೇರ್ ಮಾಡಿ

ಈ ಹಿಂದೆಲ್ಲಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಹೆಸರು, ಜನ್ಮ ದಿನಾಂಕ, ತಂದೆ ಹೆಸರು, ತಾಯಿ ಹೆಸರು, ಇತರೆ ಯಾವುದೇ ತಿದ್ದುಪಡಿಗಳು ಇದ್ದಲ್ಲಿ ಶಾಲಾ ಮುಖ್ಯಶಿಕ್ಷಕರ ಮುಖಾಂತರ ಅಗತ್ಯ ದಾಖಲೆ ಮತ್ತು ನಿಗದಿತ ಶುಲ್ಕದೊಂದಿಗೆ ಪ್ರಸ್ತಾವನೆಯನ್ನು ಸಂಬಂಧಿಸಿದ ವಿಭಾಗೀಯ ಕಛೇರಿಗಳಿಗೆ / ಮಂಡಲಿಗೆ ಅಂಚೆ ಮೂಲಕ ಸಲ್ಲಿಸಬೇಕಿತ್ತು. ನಂತರ ಹಲವು ಪ್ರಕ್ರಿಯೆಗಳು ನಡೆದು ಪರಿಷ್ಕೃತ ಅಂಕಪಟ್ಟಿ ಅಭ್ಯರ್ಥಿ ಕೈಗೆ ಬರಲು ಹಲವು ದಿನಗಳು ಆಗುತ್ತಿದ್ದವು. ಈ ರೀತಿಯ ಪತ್ರ ವ್ಯವಹಾರವನ್ನು ತಡೆಗಟ್ಟಿ ಸದರಿ ಸೇವೆಯನ್ನು ಆನ್‌ಲೈನ್‌ ಮೂಲಕ ನೀಡುವುದು ಸೂಕ್ತವೆಂದು ಮನಗಂಡು ವಿದ್ಯಾರ್ಥಿಗಳಿಗೆ ಇನ್ನುಮುಂದೆ ಆನ್‌ಲೈನ್‌ ಮೂಲಕ ಅರ್ಜಿ ಹಾಕುವ ನೂತನ ಸೌಲಭ್ಯವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಕಲ್ಪಿಸಿದೆ. ಈ ಹೊಸ ಪ್ರಕ್ರಿಯೆ ಕೆಳಗಿನಂತ ಇರುತ್ತದೆ.

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ವಿವಿಧ ಮಾಹಿತಿ ತಿದ್ದುಪಡಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವಿಧಾನ

SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಅಭ್ಯರ್ಥಿ / ತಂದೆ / ತಾಯಿಯ ಹೆಸರು, ಜನ್ಮ ದಿನಾಂಕ ಮತ್ತು ಇತರೆ ತಿದ್ದುಪಡಿಗಳನ್ನು ಮಾಡಲು ಆನ್‌ಲೈನ್‌ ಅರ್ಜಿಯ ವಿಧಾನ ಕೆಳಗಿನಂತಿದ್ದು, ಹಂತ ಹಂತವಾಗಿ ತಿಳಿಯಿರಿ.

  1. ವಿದ್ಯಾರ್ಥಿ ತಾನು ಅಭ್ಯಸಿಸಿದ ಶಾಲೆಯ ಶಾಲಾ ಮುಖ್ಯೋಪಾಧ್ಯಾಯರಿಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.
  2. ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಬೇಕು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವೆಬ್‌ಸೈಟ್‌ : http://kseab.karnataka.gov.in

  1. ನಿಗದಿತ ಶುಲ್ಕವನ್ನು ಆನ್‌ಲೈನ್‌ ಮೂಲಕ (ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕ್ ಮೂಲಕ) ಪಾವತಿಸಬೇಕು. ಆಫ್‌ಲೈನ್‌ ಮೂಲಕ ಶುಲ್ಕ ಪಾವತಿಸುವುದಾದರೆ ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಯೂನಿಯನ್ ಬ್ಯಾಂಕ್‌ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.
  2. ನಂತರ ಈ ಮಾಹಿತಿ ಸಂಬಂಧಿಸಿದ ವಿಭಾಗೀಯ ಕಛೇರಿ / ಮಂಡಲಿಯ ಲಾಗಿನ್‌ಗೆ ಹೋಗುತ್ತದೆ. ಇಲ್ಲಿ ಶಾಲಾ ಹೆಡ್‌ಮಾಸ್ಟರ್ ಅಪ್‌ಲೋಡ್‌ ಮಾಡಲಾದ ಅಗತ್ಯ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತದೆ.
  3. ಪ್ರಸ್ತಾವನೆ ತಿದ್ದುಪಡಿಗೆ ಅರ್ಹವಿದ್ದಲ್ಲಿ ಸಂಬಂಧಿಸಿದ ವಿದ್ಯಾರ್ಥಿಯ ಹಿಂದಿನ ಮೂಲ ಅಂಕಪಟ್ಟಿಯನ್ನು ಮಂಡಲಿಗೆ ಭೌತಿಕವಾಗಿ ಕಳುಹಿಸುವಂತೆ ಮುಖ್ಯ ಶಿಕ್ಷಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನಿಸಲಾಗುವುದು.
  4. ಹಿಂದಿನ ಮೂಲ ಅಂಕಪಟ್ಟಿಯನ್ನು ವಿಭಾಗೀಯ ಕಚೇರಿ/ ಮಂಡಲಿಗೆ ಸ್ವೀಕೃತವಾದ ನಂತರ ಅದನ್ನು ನಾಶಪಡಿಸಿ, ಪ್ರಸ್ತಾವನೆಯಲ್ಲಿ ಕೋರಿರುವ ತಿದ್ದುಪಡಿಗಳನ್ನು ಅಳವಡಿಸಿ, ಪರಿಷ್ಕೃತ ಅಂಕಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ಸ್ಪೀಡ್ ಪೋಸ್ಟ್‌ ಮುಖಾಂತರ ರವಾನಿಸಲಾಗುವುದು.
  5. ನಂತರ ಶಾಲಾ ಹೆಡ್‌ ಮಾಸ್ಟರ್‌ ವಿದ್ಯಾರ್ಥಿಯನ್ನು ಸಂಪರ್ಕಿಸಿ ಅಂಕಪಟ್ಟಿ ವಿತರಣೆ ಮಾಡುತ್ತಾರೆ.

ಈ ಹಿಂದಿನ ವಿಧಾನಕ್ಕೆ ಹೋಲಿಸಿದಲ್ಲಿ ಈ ವಿಧಾನ ಕಡಿಮೆ ಅವಧಿ ತೆಗೆದುಕೊಳ್ಳಲಿದೆ. ಹಾಗೂ ಅಭ್ಯರ್ಥಿ ಹಲವು ಭಾರಿ ಶಾಲೆಗೆ ಓಡಾಡುವ ಅಗತ್ಯ ಇರುವುದಿಲ್ಲ.

ಈ ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಕುರಿತು ಶಾಲಾ ಹಂತದಲ್ಲಿ ಮತ್ತು ವಿಭಾಗೀಯ ಕಚೇರಿ / ಮಂಡಲಿಯಲ್ಲಿಯೂ ಪಡೆಯಬಹುದು.

Leave a Reply

error: Content is protected !!