ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು.ಚರಿಷ್ಮಾ ಚರಿಷ್ಮ ತೆತೆಲಂಗಾಣ ರಾಜ್ಯದ ವಾರಂಗಾಲ್ ನ ಜವಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ 34ನೇ ದಕ್ಷಿಣ ವಲಯ ಅಂತರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ಸ್ 16 ವರ್ಷ ವಯೋಮಿತಿಯ 2000 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಇವರ ಮನೆಗೆ ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಸಾಧನೆಗೈದ ಬಾಲಕಿಗೆ ಶುಭಹಾರೈಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ರಮೇಶ್ ಕಲ್ಪುರೆ, ಪ್ರಕಾಶ್ ಕಡಬ, ಮನೋಹರ್ ರೈ, ಸೀತಾರಾಮ ಗೌಡ ಹೊಸವಳಿಕೆ, ಹರೀಶ್ ಕೊಡಂದೂರು, ಗಣೇಶ್ ಬಸವಪಾಲು, ಶ್ರೀನಿವಾಸ್ ರೈ ಮುಂಡ್ರಾಡಿ, ಕೃಷ್ಣ ಎಂ.ಆರ್, ಪ್ರೇಮ ಪಿಲಿಮಜಲು, ವಾಸುದೇವ, ರಮೇಶ್ ಕೊಲ್ಲೆಸಾಗು ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.