ಕೊಕ್ಕಡದಲ್ಲಿ ಬೃಹತ್ ರಕ್ತದಾನ ಶಿಬಿರ ಕೊಕ್ಕಡ

ನೇಸರ 24: ಉಪ್ಪಿನಂಗಡಿ ಹವ್ಯಕ ಮಂಡಲ ಉಜಿರೆ ವಲಯ ಇದರ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಸಹಯೋಗದಲ್ಲಿ ಕೊಕ್ಕಡದಲ್ಲಿ ಬೃಹತ್ ರಕ್ತದಾನ ಶಿಬಿರ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ವಠಾರದಲ್ಲಿ ಇಂದು ಸಡೆಯಿತು. ಉದ್ಘಾಟನೆಯನ್ನು ರೋಟೇರಿಯನ್ ಎಂ.ವಿ ಭಟ್, ನಿವೃತ್ತ ಮೇಜರ್ ಜನರಲ್ ಅಧ್ಯಕ್ಷರು ಸುಧನ ಸೌಹಾರ್ದ ಬ್ಯಾಂಕ್ ಬೆಳ್ತಂಗಡಿ, ಅಧ್ಯಕ್ಷತೆಯನ್ನು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ವಹಿಸಿದರು. ಮುಖ್ಯ ಅತಿಥಿಗಳಾಗಿ ಯೋಗೀಶ್ ಆಲಂಬಿಲ ಅಧ್ಯಕ್ಷರು ಗ್ರಾಮ ಪಂಚಾಯತ್ ಕೊಕ್ಕಡ, ಡಾ. ರಾಮಚಂದ್ರ ಭಟ್, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು, ಮುಕುಂದ ದೇವಧರ್ ವಿಪ್ರ ಪಾಕಶಾಸ್ತ್ರ ಸಂಘ ಬೆಳ್ತಂಗಡಿ, ವೆಂಕಟೇಶ ಬೆಂಡೆ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬೆಳ್ತಂಗಡಿ, ಹೇರಂಬ ಶಾಸ್ತ್ರಿ ಅಧ್ಯಕ್ಷರು ಉಪ್ಪಿನಂಗಡಿ ಹವ್ಯಕ ಮಂಡಲ, ಚಂದ್ರಶೇಖರ ಕಡೀರ ಅಧ್ಯಕ್ಷರು ರಿಕ್ಷಾ ಚಾಲಕ ಮಾಲಕರ ಸಂಘ ಕೊಕ್ಕಡ,  ಉಪಸ್ಥಿತರಿದ್ದರು.

 

ರಕ್ತದಾನ ಶಿಬಿರಕ್ಕೆ ಕೈಜೋಡಿಸಿದವರು ಸೇವಾಭಾರತಿ ಕನ್ಯಾಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶಕ್ತಿ ರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ, ವಿಪ್ರ ಪಾಕಶಾಸ್ತ್ರ ಸಂಘ ಬೆಳ್ತಂಗಡಿ, ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘ ಕೊಕ್ಕಡ. ಶಿಬಿರ ಸಂಯೋಜನೆ ಡಾ. ಗಣೇಶ್ ಪ್ರಸಾದ್ ಅಂಬಿಕಾ ಕ್ಲಿನಿಕ್ ಕೊಕ್ಕಡ, ಮಹಾಬಲೇಶ್ವರ ಭಟ್ ಕುದುಪ್ಪುಲ ಹವ್ಯಕ ವಲಯ ಉಜಿರೆ .

Leave a Reply

error: Content is protected !!