ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ಶೇರ್ ಮಾಡಿ

ನೇಸರ 24: ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜೂನಿಯರ್ ಜೇಸಿ ಘಟಕ ಉದ್ಘಾಟನಾ ಸಮಾರಂಭ ಸಂತ ಜಾನರ ಹಿ.ಪ್ರಾ.ಶಾಲೆ ಕೌಕ್ರಾಡಿ(ಕೊಕ್ಕಡ)ದಲ್ಲಿ ನಡೆಯಿತು, ಮುಖ್ಯ ಅತಿಥಿ ರೋ. ದಯಾನಂದ ನಾಯಕ್ ಪೂರ್ವಧ್ಯಕ್ಷರು ರೋಟರಿ ಕ್ಲಬ್ ಬೆಳ್ತಂಗಡಿ ಇವರು ದೀಪ ಬೆಳಗಿಸಿ ಜೇಸಿಐಯ ಮಹತ್ವನ್ನು ಸಭೆಗೆ ತಿಳಿಸಿದರು ಮತ್ತು ಘಟಕಕ್ಕೆ ಶುಭಕೋರಿದರು. ಘಟಕದ ಅಧ್ಯಕ್ಷ ಜೇಸಿ ಗಣೇಶ್. ಕೆ ವರದಿ ವಾಚಿಸಿದರು ಹಾಗೂ ಸಹಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು, ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜೇಸಿ ಶ್ರೀಧರ್ ರಾವ್ ರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋದಿಸಲಾಯಿತು. ನಿರ್ಗಮನ ಅಧ್ಯಕ್ಷರಿಗೆ ಶಾಲು ಹೋದಿಸಿ ನೆಸಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಜೆಎಫ್‍ಪಿ ಹೇಮಲತಾ ಪ್ರದೀಪ್ ಪ್ರಮಾಣ ವಚನ ಭೋದಿಸಿದರು. ನೂತನವಾಗಿ ಆಯ್ಕೆಯಾದ ಕಾರ್ಯದರ್ಶಿ ಜೇಸಿ ನರಸಿಂಹ ನಾಯಕ್‍ಗೆ ಅಧಿಕಾರ ಹಸ್ತಾಂತರಿಸಲಾಯಿತು, ನೂತನವಾಗಿ ಆಯ್ಕೆಯಾದ ಜೇಸಿರೆಟ್ ಉಮಾ ರವರ ಪರಿಚಯದೊಂದಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನೂತನ ಜೂನಿಯರ್ ಜೇಸಿಗಳಿಗೆ ಪ್ರಮಾಣ ವಚನವನ್ನು ಜೇಸಿಐ ಸೆನೆಟ್ಟರ್ ರೋಯನ್ ಉದಯ ಕ್ರಾಸ್ತಾ ನೆರೆವೇರಿಸಿದರು. ನೂತನ ಜೂನಿಯರ್ ಜೇಸಿ ಅಧ್ಯಕ್ಷರಾದ ಜೇಜೇಸಿ ಸವಿತಾರವರಿಗೆ ಹೂ ನೀಡಿ ಸಭೆಗೆ ಪರಿಚಯಿಸಲಾಯಿತು.

 

ಸನ್ಮಾನ :
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ  ಬಾಲಕೃಷ್ಣ ಹಾಗೂ ಎಸ್ ಎಸ್ ಎಲ್ ಸಿ ಅತೀ ಹೆಚ್ಚು ಅಂಕ ಪಡೆದ ಕುಮಾರಿ ಹರ್ಷಿತಾ ಇವರಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ಜೆಎಫ್‍ಪಿ ಹೇಮಲತಾ ಪ್ರದೀಪ್ ವಲಯ ಉಪಾಧ್ಯಕ್ಷರು ಕೊಕ್ಕಡ ಜೇಸಿಐ ಘಟಕ ನಡೆಸಿದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೇಸಿಐ ಸೆನೆಟ್ಟರ್ ರೋಯನ್ ಉದಯ ಕ್ರಾಸ್ತಾ ಮಾತನಾಡುತ್ತ ಜೇಸಿಐಗೆ ಸದಸ್ಯರಾಗುದರಿಂದ ಅಗುವ ಪ್ರಯೋಜನೆಗಳ ಬಗ್ಗೆ ಮಾಹಿತಿ ನೀಡಿ ಘಟಕಕ್ಕೆ ಶುಭಕೋರಿದರು, ಕೊಕ್ಕಡ ವರ್ತಕರ ಸಂಘರ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಮತ್ತು ಜೇಸಿ ಪ್ರದೀಪ್ ಕುಮಾರ್ ಮಾಜಿ ವಲಯ ಉಪಾಧ್ಯಕ್ಷರು, ಶೋಭಾ ಜೈನ್ ಉಪನ್ಯಾಸಕರು ಎಸ್ ಡಿ ಎಮ್ ಇಂಜಿನಿಯರ್ ಕಾಲೇಜು ಉಜಿರೆ ಜೇಸಿಐ ಕೊಕ್ಕಡ ಕಪಿಲ ಘಟಕದ ನೂತನ ಪದಾಧಿಕಾರಿಗಳಿಗೆ ಶುಭವನ್ನು ಕೋರಿದರು.
ಕೊಕ್ಕಡ ಜೇಸಿಐ ಸ್ಥಾಪನೆಗೆ ಕಾರಣರಾದ ಹಿರಿಯ ಜೇಸಿಗಳಾದ ಜೇಸಿ ಜೋಸೆಫ್ ಪಿರೇರಾ ಮತ್ತು ಜೇಸಿ ಪ್ರಶಾಂತ ಸಿ.ಎಚ್ ರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಜೇಸಿ ವಾಣಿ ವಿಕ್ಟರ್ ಸುವಾರಿಸ್ ವಾಚಿಸಿದರು, ಮುಖ್ಯ ಅತಿಥಿಗಳ ಪರಿಚಯವನ್ನು ಜೇಸಿ ನರಸಿಂಹ ನಾಯಕ್, ವಲಯ ಉಪಾಧ್ಯಕ್ಷರ ಪರಿಚಯವನ್ನು ಜೇಸಿ ಜಸ್ವಂತ್ ಪಿರೇರಾ, ನೂತನ ಅಧ್ಯಕ್ಷರ ಪರಿಚಯವನ್ನು ಪ್ರಶಾಂತ ಸಿ.ಎಚ್, ನೂತನ ಕಾರ್ಯದರ್ಶಿಯ ಪರಿಚಯವನ್ನು ಜೇಸಿ ರಾಜಾರಾಮ ವಾಚಿದರು, ಕಾರ್ಯಕ್ರಮದ ನಿರೂಪಣೆ ಜೇಸಿ ಜೋಸೆಫ್ ಪಿರೇರಾ, ಧನ್ಯವಾದ ಜೇಸಿ ಸರಸಿಂಹ ನಾಯಕ್ ನೆರೆವೇರಿಸಿದರು.

Leave a Reply

error: Content is protected !!