ಸಿಎಂ ಬಗ್ಗೆ ಶಾಸಕ ಹರೀಶ್ ಪೂಂಜಾ ‘ಕಲೆಕ್ಷನ್ ಮಾಸ್ಟರ್’ ಎಂಬ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು 83 ರಿಂದ ಶಾಸಕನಾಗಿ, 85ರಲ್ಲೇ ಮಿನಿಸ್ಟರ್ ಆಗಿದ್ದವನು. ಯಾರೂ ನನ್ನನ್ನು ಈ ರೀತಿ ಕರೆದಿರಲಿಲ್ಲ. ಇವರು ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ. ಇದನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಕಿಡಿಕಾರಿದರು.