ನೆಲ್ಯಾಡಿ: ಪುತ್ತೂರಿನ ಅಬ್ರಾಡ್ ಮಲ್ಟಿಪ್ಲೆಕ್ಸ್ ಸಭಾಂಗಣದಲ್ಲಿ 2023 ನೇ ಸಾಲಿನ ವಲಯ ಸಮ್ಮೇಳನ ಅದ್ದೂರಿಯಾಗಿ ಅ.28 ಮತ್ತು 29 ರಂದು ನಡೆಯಿತು.
ಈ ಸಮ್ಮೇಳನದಲ್ಲಿ ನೆಲ್ಯಾಡಿ ಜೆಸಿಐ ಘಟಕವು ಮಾಡಿರುವ ಕಾರ್ಯಕ್ರಮಗಳನ್ನು ಗುರುತಿಸಿ ವಲಯವು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಜೆಸಿಐ ಸಪ್ತಹವನ್ನು ಅಚ್ಚುಕಟ್ಟಾಗಿ ನೆರವೇರಿಸಿರುವುದಕ್ಕೆ ಪ್ರಶಸ್ತಿ, ಜೆಸಿಐ ತಿಂಗಳ ಮಾಸಪತ್ರಿಕೆ “ಪ್ರಗತಿ” ಯು 10 ಸಂಚಿಕೆಗಳನ್ನು ಪೂರೈಸಿರುವುದಕ್ಕೆ ವಲಯವು ವಿನ್ನರ್ ಪ್ರಶಸ್ತಿಯನ್ನು ಹಾಗೂ ಪ್ರಸ್ತುತ ವರ್ಷ ಹಲವು ಕಾರ್ಯಕ್ರಮಗಳನ್ನು ಗುರುತಿಸಿ ಡೈಮಂಡ್ ಘಟಕ ಎಂಬ ಪ್ರಶಸ್ತಿ ಮತ್ತು ವಲಯ ಸಮ್ಮೇಳನದಲ್ಲಿ 25 ಸದಸ್ಯರ ನೋಂದಾವಣೆ ಗೆ ವಿಶೇಷ ಬಹುಮಾನವನ್ನು ವಲಯ್ಯಾಧ್ಯಕ್ಷ ಜೆ ಎಫ್ ಡಿ ಪುರುಷೋತ್ತಮಶೆಟ್ಟಿ ಮತ್ತು ವಲಯದ ಪೂರ್ವ ಅಧ್ಯಕ್ಷರುಗಳು ಹಾಗೂ ವಲಯ ಅಧಿಕಾರಿಗಳು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷ ದಯಾಕರ ರೈ, ಪೂರ್ವ ಅಧ್ಯಕ್ಷರುಗಳಾದ ಡಾ.ಸದಾನಂದ ಕುಂದರ್, ಜಯಂತಿ, ಚಂದ್ರಶೇಖರ ಬಾಣಜಾಲ್, ಶಿವಪ್ರಸಾದ್, ಪುರಂದರ ಗೌಡ, ಜಯಾನಂದ ಬಂಟ್ರಿಯಲ್, ಮೋಹನ್ ವಿ, ರವಿಚಂದ್ರ ಹೊಸವಕ್ಲು, ನಾರಾಯಣ್ ಎನ್ ಬಲ್ಯ, ಇಸ್ಮಾಯಿಲ್, ಜಾನ್ ಪಿ.ಎಸ್, ದಯಾನಂದ ಆದರ್ಶ, ಲಕ್ಷ್ಮಣ್ ಜಿ.ಎ ಹಾಗೂ ರಶ್ಮಾ ದಯಕರ ರೈ, ಕಾರ್ಯದರ್ಶಿ ಸುಚಿತ್ರ ಬಂಟ್ರಿಯಾಲ್ ಪದಾಧಿಕಾರಿಗಳಾದ ಸುಪ್ರೀತಾ ರವಿಚಂದ್ರ, ಡಾ.ಸುಧಾಕರ್ ಶೆಟ್ಟಿ, ಲೀಲಾ ಮೋಹನ್ ಪುಷ್ಪ.ಡಿ ಉಪಸ್ಥಿತರಿದ್ದರು.