Bigg Boss ಮನೆಯಲ್ಲಿ ಟ್ರಯಾಂಗಲ್‌ ಲವ್‌ ಸ್ಟೋರಿ

ಶೇರ್ ಮಾಡಿ

ದೊಡ್ಮನೆಯಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿರೋದು ಏನೆಂದರೆ ಯಾರು ಯಾರನ್ನ ಲವ್ ಮಾಡ್ತಿದ್ದಾರೆ ಎಂಬುದೇ ನೋಡುಗರಿಗೂ ಕನ್ಫೂಸ್ ಆಗ್ತಿದೆ. ಸಂಗೀತಾ ಜೊತೆಯಿದ್ದ ಕಾರ್ತಿಕ್ ಈಗ ನಮ್ರತಾ ಹಿಂದೆ ಸುತ್ತುತ್ತಿದ್ದಾರೆ. ಎರಡು ದೋಣಿ ಮೇಲೆ ಕಾರ್ತಿಕ್ ಪಯಣಿಸುತ್ತಿದ್ದಾರೆ. ಮಾತಿನ ಭರದಲ್ಲಿ ಸಂಗೀತಾ ಕೆಮಿಸ್ಟ್ರಿ, ನಮ್ರತಾ ಮ್ಯಾತಮೆಟಿಕ್ಸ್ ಎಂದು ಕಾರ್ತಿಕ್ ಮುಗುಳು ನಗೆ ಬೀರಿದ್ದಾರೆ. ಮೂವರ ನಡುವೆ ಏನಾದರೂ ಟ್ರಯಾಂಗಲ್‌ ಲವ್‌ ಕಹಾನಿ ನಡೀತಿದ್ಯಾ ಅಂತ ಪ್ರೇಕ್ಷಕರು ಊಹೆ ಮಾಡ್ತಿದ್ದಾರೆ.

ಹೌದು.. ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನದಿಂದ ಚಾರ್ಲಿ ಸುಂದರಿ ಮೇಲೆ ಕಾರ್ತಿಕ್‌ಗೆ ಪ್ಯಾರ್ ಆಗಿತ್ತು. ಈಗ ಸಂಗೀತಾ ಜೊತೆಯಲ್ಲಿರುವಾಗಲೇ ನಮ್ರತಾ ಹಿಂದೆ ಕಾರ್ತಿಕ್ ಓಡಾಟ ಜೋರಾಗಿದೆ. ಇಂದು ಡ್ರೋನ್ ಬಳಿ ಕಾರ್ತಿಕ್ ಮಾತನಾಡುವಾಗ ಸಂಗೀತಾ ನನಗೆ ಕೆಮಿಸ್ಟ್ರಿ ಇದ್ದ ಹಾಗೆ, ನಮ್ರತಾ ಮ್ಯಾತಮೆಟಿಕ್ಸ್ ಇದ್ದಂತೆ ಎಂದು ನಮ್ರತಾ ಮುಂದೆಯೇ ಮಾತನಾಡಿದ್ದಾರೆ.

ನಾನು ಮ್ಯಾತಮೆಟಿಕ್ಸ್ ಆ ಎಂದು ನಮ್ರತಾ ಹುಸಿಮುನಿಸು ತೋರಿಸುತ್ತಾ ಹೋಗಿದ್ದಾರೆ. ನಮ್ರತಾರನ್ನ ಸಮಾಧಾನಿಸಲು ಕಾರ್ತಿಕ್ ಅವರ ಹಿಂದೆ ಹಿಂದೆ ಸುತ್ತಿದ್ದಾರೆ. ಇತ್ತ ನಮ್ರತಾಗೆ ಕಾಳು ಹಾಕ್ತಿದ್ದ ಸ್ನೇಹಿತ್ ಕೂಡ ಕಾರ್ತಿಕ್ ಕಳ್ಳಾಟ ನೋಡಿ ಗುಪ್ ಚುಪ್ ಆಗಿ ಬಿಟ್ಟಿದ್ದಾರೆ.

Leave a Reply

error: Content is protected !!
%d