8 ತಿಂಗಳ ಗರ್ಭಿಣಿಯಾಗಿದ್ದ ನಟಿ ಹೃದಯಾಘಾತದಿಂದ ವಿಧಿವಶ

ಶೇರ್ ಮಾಡಿ

8 ತಿಂಗಳು ಗರ್ಭಿಣಿಯಾಗಿದ್ದ ಮಲಯಾಳಂ ನಟಿ ಪ್ರಿಯಾ ಹೃದಯಾಘಾತದಿಂದ ಇಂದು (ನ.1) ವಿಧಿವಶರಾಗಿದ್ದಾರೆ.

ವೈದ್ಯ ಪ್ರಿಯಾ ಅವರು ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿದ್ರು. ಮದುವೆಯ ಬಳಿಕ ನಟನೆಗೆ ಪ್ರಿಯಾ ಬ್ರೇಕ್ ನೀಡಿದ್ದರು. 35ನೇ ವಯಸ್ಸಿನ ಪ್ರಿಯಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಎಂದಿನಂತೆ ಹೆಲ್ತ್ ಚೆಕಪ್‌ಗೆ ಖಾಸಗಿ ಆಸ್ಪತ್ರೆಗೆ ಹೋದಾಗ ನಟಿಗೆ ಹೃದಯಾಘಾತವಾಗಿದೆ. ನವಜಾತ ಶಿಶುಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬಳೇ ಮಗಳಾಗಿರುವ ಪ್ರಿಯಾಳ ಸಾವು ಕಂಡು ತಾಯಿ ಆಘಾತಕ್ಕೆ ಒಳಗಾಗಿದ್ದಾರೆ. ಇದೀಗ ಪ್ರಿಯಾ ನಿಧನಕ್ಕೆ ನಟ ಕಿಶೋರ್ ಸತ್ಯ ಸೇರಿದಂತೆ ಅನೇಕ ಕಿರುತೆರೆ ನಟ-ನಟಿಯರು ಕಂಬಿನಿ ಮಿಡಿದಿದ್ದಾರೆ.

Leave a Reply

error: Content is protected !!