ಸಿಲಿಕಾನ್ ಸಿಟಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದೆ. 100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಾರ್ತೀಕ್ ಅಲಿಯಾಸ್ ಎಸ್ಕೇಪ್ ಕಾರ್ತೀಕ್ ಎಂಬಾತನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಹೆಣ್ಣೂರು ಪೊಲೀಸರು ಕಾರ್ತಿಕ್ ಬಂಧಿಸಿದ್ದರು. ಹೆಣ್ಣೂರು, ಗೋವಿಂದ ರಾಜನಗರ, ಕೊತ್ತನೂರು ಪೊಲೀಸ್ ಠಾಣೆ ಸೇರಿದಂತೆ ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಈ ಆರೋಪಿ ಕಳವು ಮಾಡಿದ ಚಿನ್ನಾಭರಣಗಳನ್ನು ಅಡವಿಟ್ಟು ವಿಲಾಸಿ ಜೀವನ ನಡೆಸುತ್ತಿದ್ದ. ಗೋವಾ ಕ್ಯಾಸಿನೋದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಪ್ರಕರಣ ಸಂಬಂಧ ಗೋವಾಗೆ ತೆರಳಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿ ಕಾರ್ತಿಕ್ ಕೃತ್ಯದ ವೇಳೆ ಯಾರಿಗೂ ಹಲ್ಲೆ ಮಾಡಲ್ಲ. ಬೆದರಿಸೋದು ಇಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮನೆಗಳ್ಳತನ ಮಾಡ್ತಾನೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೈ ಚಳಕ ತೋರಿಸಿದ್ದಾನೆ. ಇತ್ತೀಚೆಗೆ ಗೋವಿಂದರಾಜನಗರ ಹಾಗೂ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ. ಮತ್ತೆ ಆಕ್ಟಿವ್ ಆಗಿದ್ದ ಕಾರ್ತಿಕ್ ಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದರು. ಪ್ರಕರಣವೊಂದರಲ್ಲಿ ಆರೋಪಿಗಳ ಬಂಧನಕ್ಜೆ ತೆರಳಿದ್ದ ಪೊಲೀಸರಿಗೆ ಅಕಸ್ಮಿಕವಾಗಿ ಸಿಕ್ಕಿಬಿದ್ದಿದ್ದಾನೆ. ಗೋವಾದ ಕೆಸಿನೊ ಒಂದರಲ್ಲಿ ಜೂಜಾಡುವ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾರ್ತಿಕ್ ಬಂಧಿಸಿ 60ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಚಿನ್ನಾಭರಣ ಕದ್ದು ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಅಡವಿಟ್ಟಿದ್ದ.
ಮನೆಗಳ್ಳ ಕಾರ್ತಿಕ್ ಗೆ ಎಸ್ಕೇಪ್ ಕಾರ್ತಿಕ್ ಅಂತ ಹೆಸರು ಬಂದಿದ್ದೆ ರೋಚಕ
2015 ರಲ್ಲಿ ಪರಪ್ಪನ ಅಗ್ರಹಾರದ ಜೈಲಿನಿಂದಲೇ ಕಾರ್ತಿಕ್ ತಪ್ಪಿಸಿಕೊಂಡಿದ್ದ. ಪರಪ್ಪನ ಅಗ್ರಹಾರದ ಜೈಲಿನಿಂದ ಹೊರಟಿದ್ದ ಇಸ್ಕಾನ್ ಊಟದ ವಾಹನದ ಕೆಳಭಾಗದಲ್ಲಿ ಅವಿತು ಎಸ್ಕೇಪ್ ಆಗಿದ್ದ. ಅಷ್ಟೇ ಅಲ್ಲದೇ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾಗಲೇ ಎಸ್ಕೇಪ್ ಆಗಿದ್ದ. ಹೀಗಾಗಿ ಕಾರ್ತಿಕ್ ಗೆ ಎಸ್ಕೇಪ್ ಕಾರ್ತಿಕ್ ಎಂಬುವ ಹೆಸರು ಬಂದಿತ್ತು. ತನ್ನ 16 ನೇ ವಯಸ್ಸಿನಲ್ಲೇ ಮನೆಗಳ್ಳತನ ಮಾಡಿ ಜೈಲು ಸೇರಿದ್ದ ಕಾರ್ತಿಕ್, ಮನೆಗಳ್ಳತನ ಮಾಡಿ ಮೋಜು ಮಸ್ತಿ ಬೆಟ್ಟಿಂಗ್ನಲ್ಲಿ ಹಣ ಕಳೆಯುತ್ತಿದ್ದ. ಅದ್ರಲ್ಲೂ ಕಳ್ಳತನ ಮಾಡಿ ಗೋವಾದ ಕೆಸಿನೋದಲ್ಲಿ ಜೂಜಾಟ ಮಾಡೋದು ಹವ್ಯಾಸವಾಗಿಬಿಟ್ಟಿತ್ತು. ಪೊಲೀಸರು ಎಷ್ಟು ಬಾರಿ ಬಂದಿಸಿದ್ರು ಪದೇ ಪದೇ ಜೈಲಿನಿಂದ ಬಂದು ಮತ್ತದೇ ಕೃತ್ಯವೆಸಗುತ್ತಿದ್ದ.