ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಪತ್ನಿಯ ಕತ್ತು ಹಿಸುಕಿ ಬಾವಿಗೆ ಎಸೆದ

ಶೇರ್ ಮಾಡಿ

ಬೆಳ್ತಂಗಡಿ ತಾಲೂಕಿನ ಮಾಚಾರೆ ಎಂಬಲ್ಲಿ ನಿನ್ನೆ ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಆದರೆ, ಗಂಡ ಸುಧಾಕರನಿಗೆ ಬೇರೊಂದು ಯುವತಿ ಜೊತೆ ಅಕ್ರಮ ಸಂಬಂಧ ಇರುವ ವಿಚಾರ ತಿಳಿದು ದಂಪತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ನಡೆದ ಜಗಳದ ವೇಳೆ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವುದು ಇದೀಗ ತಿಳಿದುಬಂದಿದೆ.

ಬೆಳಾಲು ಗ್ರಾಮದ ಮಾಚಾರಿನ ಜ್ಯೋತಿ ನಗರದಲ್ಲಿನ ಮನೆಯಲ್ಲಿರುವ ಬಾವಿಯಲ್ಲಿ ಶಶಿಕಲಾ(25) ಅವರ ಶವ ಪತ್ತೆಯಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಶಿಕಲಾ ಮತ್ತು ಸುಧಾಕರ್ ಕಳೆದ 7 ವರ್ಷಗಳ ಹಿಂದೆ ಪ್ರೀತಿ ಮಾಡಿ ಮದುವೆಯಗಿದ್ದರು. ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ 6 ವರ್ಷದ ಮಗಳು ಕೂಡ ಇದ್ದಾಳೆ. ಆದರೆ, ಸುಧಾಕರ್​ಗೆ ಬೇರೊಂದು ಯುವತಿಯ ಜೊತೆ ಅಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಇದೇ ವಿಚಾತವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು.

ಅಲ್ಲದೆ, ನಿನ್ನೆ ಕೂಡ ಜಗಳ ನಡೆದಿದೆ. ಇದು ತಾರಕಕ್ಕೇರಿ ಸುಧಾಕರ್, ಪತ್ನಿ ಶಶಿಕಲಾಳ ಕುತ್ತಿಗೆ ಹಿಸುಕಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಕೆಳಗೆ ಬಿದಿದ್ದಾಳೆ. ಬಳಿಕ ಹೆಂಡತಿಯನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದಾನೆ.

Leave a Reply

error: Content is protected !!