
ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಉಜಿರೆ-ಧರ್ಮಸ್ಥಳ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಭಾನುವಾರ ಉತ್ತಮ ಮಳೆಯಾಗಿದ್ದು, ರಾತ್ರಿ ವೇಳೆ ವಿದ್ಯುತ್ ಟವರ್ ನೆಲದತ್ತ ಬಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಂಬಂಧಪಟ್ಟವರು ಆಗಮಿಸಿ ಸ್ಥಳದಲ್ಲಿ ವಾಹನ ನಿಲ್ಲಿಸಿ, ಪರಿಶೀಲನೆಗೆ ತೆರಳುತ್ತಿದ್ದಂತೆ ವಿದ್ಯುತ್ ಟವರ್ ವಾಹನಗಳ ಮೇಲೆಯೇ ಕುಸಿದು ಬಿದ್ದಿದೆ. ಸ್ಥಳದಲ್ಲಿದ್ದವರು ಸಣ್ಣ,ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂನ ತುರ್ತು ಸ್ಪಂದನೆ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ.
ಟವರ್ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

