ಕೊಕ್ಕಡ: ಅಮೃತ ಗ್ರಾಮಪಂಚಾಯತ್ ನಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಉದ್ಘಾಟನೆ

ಶೇರ್ ಮಾಡಿ

ನೇಸರ ಫೆ.02: ಕೊಕ್ಕಡ ಅಮೃತ ಗ್ರಾಮಪಂಚಾಯತ್ ನಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವನ್ನು ಶಾಸಕರು ಹರೀಶ್ ಪೂಂಜಾ ದೀಪ ಬೆಳಗಿಸಿ ಉದ್ಘಾಟಿಸಿ ಗ್ರಾಮವು ಹೋಬಳಿ ಕೇಂದ್ರ ಆಗಿರೋದರಿಂದ ಇಂದು ಶೈಕ್ಷಣಿಕವಾಗಿ ಬೆಳೆಯುತಿರುವ ಕೊಕ್ಕಡ ಪ್ರದೇಶದಲ್ಲಿ ಈ ಡಿಜಿಟಲ್ ಗ್ರಂಥಾಲಯ ಅತ್ಯವಶ್ಯಕವಾಗಿದ್ದು ಗ್ರಾಮದ ಜನತೆಯು ಇದರ ಸದುಪಯೋಗ ಪಡೆಯಲು ಅವಕಾಶ ಕಲ್ಪಿಸಿದ ಗ್ರಾಮಪಂಚಾಯತ್ ಗೆ ಅಭಿನಂದಿಸಿದರು.

ಈ ಸಂದರ್ಭ ಕೊಕ್ಕಡ ಗ್ರಾಮದ 4 ಬೂತ್ ಗಳಿಂದ ತಲಾ 2 ಕುಟುಂಬಗಳಿಗೆ 5 ವರ್ಷದಿಂದೀಚೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅನುದಾನ ಪಡೆಯದೇ ಇರುವ ಕುಟುಂಬಕ್ಕೆ ಸೌಲಭ್ಯ ಒದಗಿಸುವ ಹಾಗೂ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವ ನೆಲೆಯಲ್ಲಿ ಸೋಲಾರ್ ಲೈಟ್ ಗಳನ್ನು ವಿತರಣೆ ಮಾಡಲಾಯಿತು.ಅಲ್ಲದೆ ಸುಮಾರು ವರ್ಷಗಳ ಕಾಲ ಪಂಚಾಯತ್ ನಲ್ಲಿ ನೀರು ಸರಬರಾಜು ಮಾಡುತ್ತಿದ್ದ ಅಂಗಾರ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಕೊಕ್ಕಡ ಗ್ರಾಮಪಂಚಾಯತ್ ಅಧ್ಯಕ್ಷ ಯೋಗೀಶ್ ಅಲಂಬಿಲ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಶ್ರೀಮತಿ ಪವಿತ್ರ.ಕೊಕ್ಕಡ ಸಿ ಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ. ಗ್ರಾಮಪಂಚಾಯತ್ ಅಭಿವೃದಿ ಅಧಿಕಾರಿ ದೀಪಕ್ ರಾಜ್,ಪಂಚಾಯತ್ ಸದಸ್ಯರಾದ.ಪ್ರಭಾಕರ್.ಶ್ರೀಮತಿ ಲತಾ.ಶ್ರೀಮತಿ ವನಜಾಕ್ಷಿ.ಜಗದೀಶ್, ಶರತ್, ಶ್ರೀಮತಿ ಲತಾ, ಶ್ರೀಮತಿ ಬೇಬಿ, ಪುರುಷೋತ್ತಮ, ಶ್ರೀಮತಿ ಜಾನಕಿ, ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಭಾರತೀ, ಗ್ರಂಥಾಲಯದ ಮೇಲ್ವಿಚಾರಕಿ ಶ್ರೀಮತಿ ಮಾಧವಿ, ಸಿಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಕೇಶವ ಹಳ್ಳಿಗೇರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!