ನೆಲ್ಯಾಡಿ: “ಬಂಟರ ಸಿರಿ” ಮನೆ ಹಸ್ತಾಂತರ

ಶೇರ್ ಮಾಡಿ

ಸರಕಾರ ನಾಚಿಸುವಂತಹ ಕೆಲಸವನ್ನು ಇಂದು ಬಂಟರ ಸಂಘ ಮಾಡಿದೆ….!!!

ನೇಸರ ಫೆ.02:ಸಂಕಷ್ಟದಲ್ಲಿರುವ ಬಂಟ ಕುಟುಂಬವೊಂದಕ್ಕೆ ಆಸರೆಯಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಾತೃ ಘಟಕ(ರಿ),ಮಂಗಳೂರು.ಪುತ್ತೂರು ತಾಲೂಕು ಸಮಿತಿ ಬಂಟರ ಸಂಘ(ರಿ),ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘ,ಯುವ ಬಂಟರ ಸಂಘ, ನೆಲ್ಯಾಡಿ ವಲಯ ಬಂಟರ ಸಂಘದ ವತಿಯಿಂದ ಶ್ರೀಮತಿ ಬೇಬಿ ಹೊಸಮನೆ ನೆಲ್ಯಾಡಿ ಇವರಿಗೆ “ಬಂಟರ ಸಿರಿ” ಮನೆ ಹಸ್ತಾಂತರ ಕಾರ್ಯಕ್ರಮ ಫೆ.02 ರಂದು ನಡೆಯಿತು.

ಮನೆಯ ಯಜಮಾನಿ ಶ್ರೀಮತಿ ಬೇಬಿ ಯವರಿಂದ ದೀಪವನ್ನು ಬೆಳಗಿಸಿ,ಅತಿಥಿ-ಗಣ್ಯರು ರಿಬ್ಬನ್ ಕತ್ತರಿಸಿ ಗೃಹಪ್ರವೇಶಿಸಿ ಯಜಮಾನಿಗೆ ಬೀಗದ ಕೀಯನ್ನು ನೀಡುವ ಮೂಲಕ ನೂತನ ಮನೆಯನ್ನು ಹಸ್ತಾಂತರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಹೇಮನಾಥ ಶೆಟ್ಟಿಯವರು “ಬಂಟ” ಎಂದರೆ ಶ್ರೀಮಂತ ಎಂಬ ಮಾತಿದೆ.ಆದರೆ ಅವರಲ್ಲಿ ಬಡವರು ಇದ್ದಾರೆ, ಅಂಥವರನ್ನು ಗುರುತಿಸುವ ಕೆಲಸವನ್ನು ನಮ್ಮ ಬಂಟ ಸಮಾಜವು ಮಾಡುತ್ತಿದೆ.ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಾದ್ಯಂತ ಕಡುಬಡವ ಬಂಟರನ್ನು ಗುರುತಿಸಿ ಅವರಿಗೆ ಸಹಾಯಹಸ್ತವನ್ನು ನಮ್ಮ ಸಂಘ ಮಾಡುತ್ತಿದೆ,ನೆಲ್ಯಾಡಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ನಮ್ಮ ಸಮಾಜದವರುವಿದ್ದರೂ, ಸಹಾಯಹಸ್ತವನ್ನು ಚಾಚುವುದರಲ್ಲಿ ಅವರು ಮುಂದಿದ್ದಾರೆ ಎಂದರು,ನಮಗೆ ಶ್ರೀಮಂತಿಕೆ ಇರಬೇಕು,ಆ ಶ್ರೀಮಂತಿಕೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟರೆ ಶ್ರೀಮಂತಿಕೆಗೆ ಒಂದು ಬೆಲೆ ಬರುತ್ತದೆ ಎಂದು ಈ ಸಂದರ್ಭದಲ್ಲಿ ನುಡಿದರು.

ಬಂಟರ ಸಂಘದಿಂದ ಸಮಾಜದ ಬಡವರಿಗೆ ಸಿಗುವ ಸೌಲಭ್ಯಗಳು ಮತ್ತು ಸಹಾಯಹಸ್ತ ಗಳ ಬಗ್ಗೆ,ಮುಂದಿನ ದಿನಗಳಲ್ಲಿ ಬಂಟರ ಸಮಾಜದಿಂದ ಹಾಕಿಕೊಂಡ ಕಾರ್ಯಕ್ರಮಗಳ ವಿವರ,ಮನೆ ನಿರ್ಮಾಣಕ್ಕೆ ಸಹಾಯ ನೀಡಿದವರನ್ನು ಸ್ಮರಿಸಿಕೊಂಡರು,ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ಬ್ಯಾಲ್ಯೊಟು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಬೂಡಿಯಾರ್ ರಾದಕೃಷ್ಣ.ರೈ,ಹೇಮಂತ.ರೈ ಮನವಳಿಕೆ, ಸಂದರ್ಭೋಚಿತವಾಗಿ ಮಾತನಾಡಿ ಮನೆ ಯಜಮಾನಿಗೆ ಶುಭವನ್ನು ಹಾರೈಸಿದರು. ತಾಲೂಕು ಬಂಟರ ಸಂಘದ ಅಧ್ಯಕ್ಷ ದಯಾನಂದ ಮನವಳಿಕೆ,ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಹಾಸ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಜಯರಾಜ್, ಅಗ್ರಾಳ ನಾರಾಯಣ.ರೈ, ಪ್ರಾ.ಕೃ.ಪ.ಸ.ಸಂಘದ ಕಾರ್ಯನಿರ್ವಹಣಾಧಿಕಾರಿ ದಯಾಕರ.ರೈ,ಸತೀಶ್.ರೈ ಕೋಣಾಲು ಗುತ್ತು ಮೊದಲಾದವರು ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲಾ ಅತಿಥಿ ಗಣ್ಯರಿಗೆ ಹಾಗೂ ಮನೆ ನಿರ್ಮಾಣಕ್ಕೆ ಸಹಾಯ ಹಸ್ತವನ್ನು ಚಾಚಿದವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
“ಬಂಟರ ಸಿರಿ” ಎಂಬ ಈ ಮನೆ ನಿರ್ಮಾಣವಾಗಲು ಪ್ರಮುಖ ಸೂತ್ರದಾರಿ ಜಯಾನಂದ ಬಂಟ್ರಿಯಾಲ್ ಇವರಿಗೆ ಮನೆ ಯಜಮಾನಿ ಶಾಲು ಹೊದಿಸಿ ಕೃತಜ್ಞತೆಯನ್ನು ಸಲ್ಲಿಸಿದರು.

ಈ ಮನೆ ನಿರ್ಮಾಣಕ್ಕೆ ಹೆಚ್ಚಿನ ರೀತಿಯಲ್ಲಿ ಧನ ಸಹಾಯ ನೀಡಿದ ಐಕಳ ಹರೀಶ್ ಶೆಟ್ಟಿ, ರವಿ ಶೆಟ್ಟಿ ಮೂಡುಬೈಲು ನೇತೃತ್ವದ ಬಂಟ್ಸ್ ಫ್ರೆಂಡ್ಸ್ ಕತಾರ್, ಉಡುಪಿ ದಿಲೇಶ್ ಶೆಟ್ಟಿ ಅಭಿಮಾನಿ ಬಳಗದವರಿಗೆ ಈ ಸಂದರ್ಭದಲ್ಲಿ ಜಯಾನಂದ ಬಂಟ್ರಿಯಾಲ್ ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸಿದರು.

ತುಕಾರಾಮ.ರೈ ಪ್ರಾಸ್ತಾವಿಕ ಮಾತನಾಡಿದರು,ಸುಚಿತ್ರ ಬಂಟ್ರಿಯಾಲ್ ಮತ್ತು ನಮಿತಾ ಪ್ರಾರ್ಥಿಸಿದರು,ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ.ರೈ ಮನವಳಿಕೆ ಸ್ವಾಗತಿಸಿ, ದಯಾಕರ.ರೈ ಧನ್ಯವಾದ ಸಮರ್ಪಿಸಿದರು,ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!