ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ -75ರ ಮಂಗಳೂರು – ಬೆಂಗಳೂರು ಮಧ್ಯೆ ನೆಲ್ಯಾಡಿ ಬೆಥನಿ ಶಾಲೆಯ ಬಳಿ ನಿಲ್ಲಿಸಿದ್ದ ಎಲ್‌ಪಿಜಿ ಟ್ಯಾಂಕರ್ ನ ಹಿಂಬಾಗಕ್ಕೆ ನ.11ರ ಬೆಳಗಿನ ಜಾವ 1.45 ಕ್ಕೆ ಡಿಕ್ಕಿ ಹೊಡೆದ ಕಾರು.
ಮಂಗಳೂರಿನಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನೆಲ್ಯಾಡಿ ಬೆಥನಿ ಶಾಲೆಯ ಬಳಿ ಹೆದ್ದಾರಿಯು ಸಾಕಷ್ಟು ಅಗಲವಾಗಿದ್ದರೂ ಸಹ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಹೆದ್ದಾರಿಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ ಹೆದ್ದಾರಿಯ ತೀರಾ ಬದಿಯಲ್ಲಿ ನಿಲ್ಲಿಸಿದ್ದ ಎಲ್‌ಪಿಜಿ ಟ್ಯಾಂಕರಿನ ಹಿಂಭಾಗಕ್ಕೆ ಜಯಪ್ರಕಾಶ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವನ್ ರೇಗೋ, ಪ್ರದೀಪ್ ಮತ್ತು ಜಯಪ್ರಕಾಶ್ ರವರಿಗೆ ಗಾಯಗಳಾಗಿ ಚಿಕಿತ್ಸೆಗೆ ಮಂಗಳೂರು ಎಜೆ ಆಸ್ಪತ್ರೆಗೆ ತೆರಳಿದ್ದು.
ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ, ಸಿಬ್ಬಂದಿಗಳಾದ ಪ್ರತಾಪ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.