“ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ-ಇದೆಲ್ಲಾ ಇಷ್ಟ ಆಗಲ್ಲ…”- ಮುಖಕ್ಕೆ ಹೊಡ್ದಂಗೆ ಹೇಳಿದ ಸಂಗೀತಾ…ಕೂಗಾಡಿದ ಕಾರ್ತಿಕ್!!

ಶೇರ್ ಮಾಡಿ

ಬಿಗ್ ಬಾಸ್’ನ ಪ್ರತಿಯೊಂದು ಸೀಸನ್’ಗಳಲ್ಲೂ ಕೆಲವರ ಮಧ್ಯೆ ಪ್ರೀತಿ ಮೂಡುವುದನ್ನು ನೋಡಿರಬಹುದು. ಆದರೆ ಈ ಬಾರಿ ಕೊಂಚ ಡಿಫರೆಂಟ್ ಆಗಿದೆ. ಇಶಾನಿ ಮತ್ತು ಮೈಕಲ್ ಸ್ವತಃ ನಾವಿಬ್ಬರು ಲವ್ ಬರ್ಡ್ಸ್ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ಕಾರ್ತಿಕ್ ಮತ್ತು ಸಂಗೀತಾ ಹೆಚ್ಚು ಆಪ್ತವಾಗಿದ್ದು, ಇವರಿಬ್ಬರ ಸಂಬಂಧವೇನು ಎಂಬುದೇ ಅರ್ಥವಾಗುತ್ತಿಲ್ಲ.

ಅಂದಹಾಗೆ ನನಗೆ ಕಾರ್ತಿಕ್ ಮೇಲೆ ಪ್ರೀತಿಯಂತಹ ಯಾವುದೇ ಭಾವನೆ ಇಲ್ಲ, ನಾವು ಫ್ರೆಂಡ್ಸ್ ಅಷ್ಟೇ ಎಂದು ಸಂಗೀತಾ ಅನೇಕ ಬಾರಿ ಹೇಳಿದ್ದುಂಟು. ಈ ಹೇಳಿಕೆಗಳು ಕಾರ್ತಿಕ್ ಅವರಿಗೆ ಬೇಸರ ತರಿಸಿದಂತಿದೆ.

ನವೆಂಬರ್​ 10ರ ಸಂಚಿಕೆಯಲ್ಲಿ ಸಂಗೀತಾ, ತುಕಾಲಿ ಸಂತೋಷ್ ಮತ್ತು ಕಾರ್ತಿಕ್​ ಅವರು ಒಂದೆಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಆಗ ಕಾರ್ತಿಕ್ “ಹೇಗಿದೆ ನಮ್ಮಿಬ್ಬರ ಜೋಡಿ?” ಎಂದು ಸಂತೋಷ್ ಬಳಿ ಕೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಸಂಗೀತಾ, “ನೀವು ಹೀಗೆ ಮಾಡೋದ್ರಿಂದಲೇ ಜನರು ಆ ರೀತಿ ಅಂದುಕೊಂಡಿದ್ದು” ಎನ್ನುತ್ತಾರೆ. ಅದೇ ವೇಳೆ ಸಂತೋಷ್ ಅವರು ಕೂಡ, “ನಾವು ಇಷ್ಟು ದಿನ ನಿಮ್ಮನ್ನು ಲವ್ವರ್ಸ್ ಅಂದುಕೊಂಡಿದ್ದೆವು. 5 ವಾರದಲ್ಲಿ ನನಗೆ ಕಾಣಿಸಿದ್ದು ಅದೇ ರೀತಿ” ಎಂದಿದ್ದಾರೆ.” ಆದರೆ ನನಗೆ ಆ ರೀತಿ ಏನೂ ಇಲ್ಲ. ಅವರದ್ದು ಒನ್​ ಸೈಡ್ ಲವ್​​. ಹಿಂಗೇ ಮಾಡಿದರೆ ಒದೆ ಬೀಳುತ್ತೆ” ಎಂದು ಸಂಗೀತಾ ಮುಖಕ್ಕೆ ಹೊಡೆದಂಗೆ ನೇರವಾಗಿ ಹೇಳಿದ್ದಾರೆ.

ಇನ್ನು ಕಾರ್ತಿಕ್​ ಅವರ ಕೆಲ ಮಾತುಗಳು ಸಂಗೀತಾಗೆ ಇಷ್ಟ ಆಗುತ್ತಿಲ್ಲ. ಇದೇ ವಿಚಾರಕ್ಕೆ ಅದೆಷ್ಟೋ ಬಾರಿ ಗಲಾಟೆಗಳು ಆಗಿದ್ದವು. ಇನ್ನು ಗಾರ್ಡನ್​ ಏರಿಯಾದಲ್ಲೂ ಕೂಡ ಕಳೆದ ದಿನ ಇಂತಹದ್ದೇ ಘಟನೆ ನಡೆದಿತ್ತು. “ನಾನು ಕೂಡ ಇಲ್ಲಿ ಕಂಟೆಂಟ್​ ಕೊಡೋಕೆ ಬಂದಿದ್ದೇನೆ. ನೀವು ಪದೇ ಪದೇ ಬಂದು ಸೈಡಿಗೆ ಹೋಗು ಅಂತಾ ಹೇಳಿದ್ರೆ ಅದು ಸರಿ ಎನಿಸುವುದಿಲ್ಲ” ಎಂದು ಸಂಗೀತಾ ಹೇಳಿದ್ದಾರೆ. ಅದಕ್ಕೆ ನಾನು ನಿನಗೆ ಹೇಳಿದ್ದಲ್ಲ ಎಂದು ಕಾರ್ತಿಕ್ ಹೇಳಿದ್ರೂ ಸಹ ಸಂಗೀತಾ ಅದನ್ನು ಒಪ್ಪಿಕೊಳ್ಳೋಕೆ ಸಿದ್ಧ ಇರಲಿಲ್ಲ.

ಇದೇ ವಿಚಾರಕ್ಕೆ ಕೋಪಗೊಂಡ ಕಾರ್ತಿಕ್ ಕೈಯಲ್ಲಿದ್ದ ತಿಂಡಿಯನ್ನು ನೆಲಕ್ಕೆ ಎಸೆದು ಅಲ್ಲಿ ಹೊರಟು ಹೋಗಿದ್ದಾರೆ. ಇದೇ ಕೋಪದಿಂದ ಬಾಗಿಲನ್ನು ಜೋರಾಗಿ ತೆಗೆದು ಸದ್ದು ಮಾಡಿದ್ದರು. ಇನ್ನು ಊಟ ಎಸೆದಿದ್ದು ಸಂಗೀತಾಗೆ ಸರಿ ಎನಿಸಲಿಲ್ಲ. ಅಲ್ಲೇ ಇದ್ದ ವರ್ತೂರ್ ಸಂತೋಷ್ ಜೊತೆ ಅಸಮಾಧಾನ ಹೊರಹಾಕಿದ್ದರು.

Leave a Reply

error: Content is protected !!