ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ದೀಪಗಳ ಹಬ್ಬ ದೀಪಾವಳಿ ಆಚರಣೆ

ಶೇರ್ ಮಾಡಿ

ಉದನೆ ಸೈಂಟ್ ಆಂಟನೀಸ್ ಪ್ರೌಢ ಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನಲ್ಲಿ ದೀಪಗಳ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಸಂಸ್ಥೆಯ ಆಡಳಿತಾಧಿಕಾರಿ ಜಾನ್ ಕೆ.ಕೆ, ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಸ್ಥರಾದ ಶ್ರೀಧರ ಗೌಡ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದರು.

ಸಹಶಿಕ್ಷಕರಾದ ಯಶೋಧರ ಇವರು ದೀಪಾವಳಿಯ ಮಹತ್ವ ತಿಳಿಸಿದರು.
ಗಣೇಶ್ ಸ್ಟೋರ್ ನೆಲ್ಯಾಡಿ, ಇದರ ಮಾಲ್ಹಕರಾದ ದಿನೇಶ್ M T ಇವರು ಎಲ್ಲರಿಗೂ ಅವಲಕ್ಕಿ ಹಾಗೂ ರಸಾಯನ ವ್ಯವಸ್ಥೆ ಮಾಡಿದರು. ಅಜಿತ್ ಓರ್ಕಳ, ಎಲ್ಲರಿಗೂ ಸಿಹಿತಿಂಡಿ ಲಡ್ಡಿನ ವ್ಯವಸ್ಥೆ ಮಾಡಿದರು‌.

ಪ್ರತಿ ವರ್ಷದಂತೆ ಈ ವರ್ಷವೂ ಅಜಿತ್ ಓರ್ಕಳ ಇವರು ಕೊಡಮಾಡಿದ ಪಟಾಕಿ ಸಿಡಿಮದ್ದು ಪ್ರದರ್ಶನ ವಿದ್ಯಾರ್ಥಿಗಳನ್ನು ದೀಪಾವಳಿ ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು.

ಎಲ್ಲರೂ ದೀಪಾವಳಿಯ ವಿಶೇಷ ತಿನಿಸು ಅವಲಕ್ಕಿ, ಬಾಳೆಹಣ್ಣು ರಸಾಯನ, ಲಡ್ಡು ಸವಿದು ಸಂತಸಪಟ್ಟರು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು,ವಿದ್ಯಾರ್ಥಿಗಳು ಸಂಭ್ರಮದಲ್ಲಿ ಭಾಗಿಯಾದರು.

Leave a Reply

error: Content is protected !!