ಬೆಳ್ತಂಗಡಿ: ಚಾರ್ಮಾಡಿಯ ಅರಣ್ಯದಲ್ಲಿ ಕಡವೆ ಬೇಟೆಯಾಡಿ ಹೊಸಮಠ ಎಂಬಲ್ಲಿ ಮನೆಯೊಂದರಲ್ಲಿ ಮಾಂಸ ಮಾಡಲಾಗಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ನ.13ರಂದು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ ಪ್ರಕರಣ ವರದಿಯಾಗಿದೆ.
ಕಾಡಿನಲ್ಲಿ ಕಡವೆ ಬೇಟೆಯಾಡಿ ಮನೆಯಲ್ಲಿ ಮಾಂಸ ಮಾಡಲಾಗಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಬಂದಿದ್ದು, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಬಿ.ಜಿ., ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ಬೀಟ್ ಪಾರೆಸ್ಟರ್ ಪಾಂಡುರಂಗ ಕಮತಿ, ಸಿಬ್ಬಂದಿಗಳಾದ ಸಂತೋಷ್, ಅಖಿಲೇಶ್ ಮೊದಲಾದವರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದ್ದಾರೆ.
ಕಡವೆ ಮಾಂಸ ಮಾಡಿದ ಯಾವುದೇ ಕುರುಹು ಮನೆಯಲ್ಲಿ ಪತ್ತೆಯಾಗಿಲ್ಲ, ಆದರೆ ರಕ್ತದಕಲೆಯಿದ್ದ ಗೋಣಿಚೀಲಗಳು ಸಿಕ್ಕಿದ್ದರೂ, ಇದು ಖಚಿತಗೊಂಡಿಲ್ಲ ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ.