ಮನವೊಲಿಸಲು ಊಟದ ಡಬ್ಬ ಹಿಡ್ಕೊಂಡು ಬಿಗ್’ಬಾಸ್ ಮನೆಗೆ ಬಂದ್ರು ವರ್ತೂರ್ ಸಂತೋಷ್ ತಾಯಿ! ಮಗನಿಗೆ ಹೇಳಿದ್ದೇನು ಗೊತ್ತಾ?

ಶೇರ್ ಮಾಡಿ

ಐದನೇ ವಾರದ ಮುಕ್ತಾಯದ ಸಂಚಿಕೆಯಲ್ಲಿ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ನೋವಿನ ಬಗ್ಗೆ ಮನಬಿಚ್ಚಿ ಕಿಚ್ಚನ ಮುಂದೆ ಮಾತನಾಡಿದ ಅವರು, ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಬಿಗ್ ಬಾಸ್ ಮನೆಯ ಪ್ರಬಲ ಸ್ಪರ್ಧಿಯಾಗಿರುವುದು ಮಾತ್ರವಲ್ಲ, ವರ್ತೂರು ಸಂತೋಷ್ ಅವರು ಪ್ರೇಕ್ಷಕರ ಅಚ್ಚುಮೆಚ್ಚಿನ ವ್ಯಕ್ತಿಯೂ ಹೌದು. ಆದರೆ ಹುಲಿ ಉಗುರಿನ ಉಂಗುರ ಧರಿಸಿದ್ದ ಆರೋಪದಡಿ ಅರೆಸ್ಟ್ ಆಗಿದ್ದ ಅವರು, ಬಳಿಕ ಆ ನೋವಿನಿಂದ ಕಂಗಾಲಾಗಿ ಹೋಗಿದ್ದರು. ಇವೆಲ್ಲದರ ಹೊರತಾಗಿಯೂ ಅವರಿಗೆ ಸಾರ್ವಜನಿಕರ ಅಗಾಧ ಬೆಂಬಲ ದೊರೆತಿತ್ತು.

ಇನ್ನು ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಇರಲು ಒಪ್ಪುತ್ತಿಲ್ಲ. ಇದೇ ಕಾರಣದಿಂದ ನಟಿ ಸುಷ್ಮಾ ರಾವ್ ಅವರನ್ನು ಮನೆಯೊಳಗೆ ಕಳುಹಿಸಿ ಮನವೊಲಿಸುವ ಯತ್ನ ಮಾಡಲಾಗಿತ್ತು. ಈ ಬೆನ್ನಲ್ಲೇ ಅವರ ಸಂತೋಷ್ ಅವರ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ “ನನ್ನ ಮಗ ನನ್ನ ಕನಸನ್ನು ಈಡೇರಿಸ್ತಾನೆ” ಎಂಬ ಮಾತನ್ನು ಕೂಡ ಹೇಳಿದ್ದಾರೆ.

ಇನ್ನು ತಾಯಿಯ ಮಾತಿಗೆ ಬೆಲೆ ಕೊಟ್ಟು, ಹಿಂದೆ ನಡೆದ ಘಟನೆಗಳನ್ನು ಮರೆತು ಬಿಗ್ ಬಾಸ್ ನಲ್ಲಿ ವರ್ತೂರ್ ಸಂತೋಷ್ ಇರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

Leave a Reply

error: Content is protected !!