ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲ ಬೇರಿಗೆ ತೊಂದರೆಯಾಗಬಹುದು. ಹೀಗಾಗಿ, ಕೂದಲು ಕೀಳುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ, ಬೇರೆ ಕೂದಲು ಬಿಳಿಯಾಗುವುದಕ್ಕೂ ನಿಮ್ಮ ಕೂದಲು ಕಿತ್ತುಕೊಳ್ಳುವುದಕ್ಕೂ ಸಂಬಂಧವಿಲ್ಲ. ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?
ಕೂದಲಿನ ಬಗ್ಗೆ ನಮಗೆ ಹಲವು ನಂಬಿಕೆಗಳಿವೆ. ಅದರಲ್ಲೂ ಬಿಳಿಯಾದ ಕೂದಲನ್ನು ಕಿತ್ತರೆ ಅದರ ಸುತ್ತಲಿನ ಕೂದಲು ಬಿಳಿಯಾಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಇದು ನಿಜವಾ? ಕೂದಲಿನ ಕೋಶಕದಲ್ಲಿ ಮೆಲನಿನ್ ಕಡಿಮೆಯಾದಾಗ ನಿಮ್ಮ ಕೂದಲಿನ ಬಣ್ಣ ಬದಲಾವಣೆಯಾಗುತ್ತದೆ. ನಿಮ್ಮ ಜೀವಕೋಶಗಳು ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಂತೆ, ನಿಮ್ಮ ಕೂದಲು ಬೂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ, ನಿಮ್ಮ ಬೂದು ಕೂದಲನ್ನು ಕಿತ್ತುಕೊಳ್ಳುವುದರಿಂದ ಉಳಿದ ಕೂದಲುಗಳು ಕೂಡ ಬಿಳಿಯಾಗುತ್ತವೆ ಎಂಬುದು ನಿಜವಲ್ಲ.
ಆದರೆ, ಕೂದಲನ್ನು ಕಿತ್ತುಕೊಳ್ಳುವುದರಿಂದ ಕೂದಲ ಬೇರಿಗೆ ತೊಂದರೆಯಾಗಬಹುದು. ಹೀಗಾಗಿ, ಕೂದಲು ಕೀಳುವುದು ಒಳ್ಳೆಯ ಅಭ್ಯಾಸವಲ್ಲ. ಆದರೆ, ಬೇರೆ ಕೂದಲು ಬಿಳಿಯಾಗುವುದಕ್ಕೂ ನಿಮ್ಮ ಕೂದಲು ಕಿತ್ತುಕೊಳ್ಳುವುದಕ್ಕೂ ಸಂಬಂಧವಿಲ್ಲ. ಒಂದು ಕೂದಲು ಕಿತ್ತುಕೊಂಡರೆ ಅದು ಇತರ ಕೂದಲಿನ ಬೇರುಗಳನ್ನು ದುರ್ಬಲಗೊಳಿಸಬಹುದು. ಇದು ನಿರ್ದಿಷ್ಟ ಸ್ಥಳದಲ್ಲಿ ಕೂದಲು ಮತ್ತೆ ಬೆಳೆಯುವುದನ್ನು ತಡೆಯಬಹುದು.
ನಮ್ಮ ಜೀವನಶೈಲಿಯು ನಮ್ಮ ಜೀವಕೋಶಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ ನೀವು ಸೇವಿಸಬೇಕಾದ ಮತ್ತು ತಪ್ಪಿಸಬೇಕಾದ ಆಹಾರಗಳು ಇಲ್ಲಿವೆ. ಯಾವ ಆಹಾರಗಳು ಉತ್ತಮ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತವೆ? ಎಂಬ ಮಾಹಿತಿ ಇಲ್ಲಿದೆ.
ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ಚರ್ಮಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಸೂರ್ಯನಿಗೆ ಅತಿಯಾದ ಶಾಖ ಕೂದಲಲ್ಲಿ ಮೆಲನಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗಲು ಕಾರಣವಾಗುತ್ತದೆ.
ಧೂಮಪಾನವು ದೇಹದ ಮೇಲೆ ವಿವಿಧ ನೆಗೆಟಿವ್ ಪರಿಣಾಮಗಳನ್ನು ಬೀರುತ್ತದೆ. ಅತಿಯಾದ ಧೂಮಪಾನವು ನೆತ್ತಿಯಲ್ಲಿ ರಕ್ತದ ಹರಿವನ್ನು ತಡೆಯುತ್ತದೆ. ಇದು ಕೂದಲಿನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ವಾಸ್ತವವಾಗಿ, ಧೂಮಪಾನವು ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಒತ್ತಡ ಮತ್ತು ಆತಂಕದಂತಹ ಇತರ ಅಸ್ವಸ್ಥತೆಗಳು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅತಿಯಾದ ಒತ್ತಡವು ನಿದ್ರೆಯ ಕೊರತೆ, ಹಸಿವಿನ ಕೊರತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ಇವುಗಳು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದಕ್ಕೆ ಕಾರಣವಾಗಬಹುದು.
ಕೂದಲಿನಲ್ಲಿ ಮೆಲನಿನ್ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ವಿಟಮಿನ್ಗಳು ಪ್ರಮುಖ ಪೋಷಕಾಂಶವಾಗಿದೆ. ಇದಲ್ಲದೆ, ವಿಶೇಷವಾಗಿ ವಿಟಮಿನ್ ಬಿ 12 ಕೆಂಪು ರಕ್ತ ಕಣಗಳನ್ನು ಉಳಿಸಿಕೊಳ್ಳಲು ದೇಹಕ್ಕೆ ಅಗತ್ಯವಾಗಿರುತ್ತದೆ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಕೂದಲಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಕೊರತೆಯು ಕೂದಲು ಬಿಳಿಯಾಗುವುದು ಮುಂತಾದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 6 ಲಕ್ಷ ರೂಪಾಯಿ.
ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕು ಸಜಿಪ ಪಡು ಗ್ರಾಮದ ಕೋಟೆಕನಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎರಡು ಪಿಕಪ್ ವಾಹನ ಸಂಖ್ಯೆ KA 12 A1792 ಹಾಗೂ ಪಿಕಪ್ ವಾಹನ ಸಂಖ್ಯೆ ಕೆಎ 18 B 0526 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಆರೋಪಿತರ ಮೇಲೆ ತಕ್ಷೀರು ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪಿ., ಉಪವಲಯ ಅರಣ್ಯ ಅಧಿಕಾರಿ ಯಶೋಧರ, ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ, ಶೋಬಿತ್, ಸ್ಮಿತಾ ಮತ್ತು ರೇಖಾ ಸಚಿನ್, ಅರಣ್ಯ ವೀಕ್ಷಕರಾದ ಭಾಸ್ಕರ ಹಾಗೂ ಇಲಾಖಾ ವಾಹನ ಚಾಲಕ ಜಯರಾಮ್ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್ ಮರಿಯಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪಿ. ನಡೆಸಲಿದ್ದಾರೆ.