ಕಾಲೇಜು ವಿದ್ಯಾರ್ಥಿ ಮೇಲೆ ಕುದಿಯುವ ಎಣ್ಣೆ ಎರಚಿದ ಕುಡುಕ; ಮುಂದೆನಾಯ್ತು?

ಶೇರ್ ಮಾಡಿ

ಕಾಲೇಜು ವಿದ್ಯಾರ್ಥಿ ಮೇಲೆ ಕುದಿಯುವ ಎಣ್ಣೆಯನ್ನೇ ಕುಡುಕನೊಬ್ಬ ಎರಚಿದ ಘಟನೆ ಶಿವಮೊಗ್ಗ ದ ರಾಯಲ್ ಆರ್ಕೆಡ್ ಎದುರು ನಡೆದಿದೆ.

ಕಬಾಬ್ ಅಂಗಡಿ ಮಾಲೀಕನ ಜೊತೆ ಜಗಳವಾಡುತ್ತಿದ್ದ ವೇಳೆ ರೊಚ್ಚಿಗೆದ್ದ ಪಾನಮತ್ತ ವ್ಯಕ್ತಿ, ಮಾಲೀಕನ ಮೇಲೆ ಎಣ್ಣೆ ಎರಚಲು ಯತ್ನಿಸಿದ್ದಾನೆ. ಈ ವೇಳ ವಿದ್ಯಾರ್ಥಿ ಮೇಲೆ ಎಣ್ಣೆ ಎರಚಿದ್ದು, ಮೈಮೇಲೆ ಬಿಸಿ ಎಣ್ಣೆ ಬಿದ್ದಿದ್ದರಿಂದ ವಿದ್ಯಾರ್ಥಿ ಧನುಷ್​ಗೆ ಬೊಬ್ಬೆ ಬಂದಿದೆ. ಕೂಡಲೇ ಗಾಯಾಳು ವಿದ್ಯಾರ್ಥಿ ಹಾಗೂ ಕುಡುಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದೊಯ್ಯಲಾಯಿತು.

ಕುಡುಕನ ಅವಾಂತರ
ಇನ್ನು ಕುಡುಕನ ಕಿರಿಕ್ ಹೆಚ್ಚುತ್ತಿದ್ದಂತೆ ಈ​ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ವಾಹನದ ಕೆಳಗೆ ಪಾನಮತ್ತ ವ್ಯಕ್ತಿ ನುಸುಳಿ ಕೆಲಹೊತ್ತು ಪೊಲೀಸರನ್ನು ಕಾಡಿದ್ದಾನೆ. ನಂತರ ಆ್ಯಂಬುಲೆನ್ಸ್ ಮೂಲಕ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave a Reply

error: Content is protected !!