
ಮಕ್ಕಳಿಗೆ ಮೊಬೈಲ್ ಕೊಟ್ಟರೆ ಊಟ, ಮೊಬೈಲ್ ಕೊಟ್ಟರೆ ಸುಮನ್ನಿರುವ ಪರಿಸ್ಥಿತಿ ಬಂದೊದಗಿದೆ. ಕಣ್ಣು ಬಿಟ್ಟು ಸರಿಯಾಗಿ ಜಗತ್ತು ನೋಡದ ಒಂದು ವರ್ಷದ ಮಗುವಿನಿಂದ ಹಿಡಿದು ದೊಡ್ಡವರ ವರೆಗೂ ಮೊಬೈಲ್ಗೆ ಅಡಿಕ್ಟ್ ಆಗ್ಬಿಟ್ಟಿದ್ದಾರೆ. ಅದರಂತೆ ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ-ಮಗನ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು…ಮೊಬೈಲ್ ಬಳಸುವ ವಿಚಾರಕ್ಕೆ ಶುರುವಾದ ಜಗಳ ಕೊನೆಗೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.
ಮೊಬೈಲ್ ಬಳಸುವ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಿಂದ ತಂದೆ ಅಸ್ಲಂಪಾಷ, ತನ್ನ ಮಗ ಉಮೇಜ್ಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಉಮೇಜ್ ಮೃತಪಟ್ಟಿದ್ದಾನೆ.
ಈ ಬಗ್ಗೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಸ್ಲಂಪಾಷನನ್ನು ಬಂಧಿಸಿದ್ದಾರೆ.


