ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ, ನೇತ್ರ ಬಂದು ಗಂಗಾಧರ ಶೆಟ್ಟಿ ಹೊಸಮನೆ ರವರ 50 ನೇ ಕಣ್ಣಿನ ಶಿಬಿರ
ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್, ಪುತ್ತೂರು ಲಯನ್ಸ್ ಕ್ಲಬ್ ದುರ್ಗಾಂಬಾ ಅಲಂಕಾರ ಮತ್ತು ಜೆಸಿಐ ಸಂಸ್ಥೆ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಸಂಚಾರಿ ನೇತ್ರ ಚಿಕಿತ್ಸಾ ಘಟಕ, ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವುಗಳ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಶಸ್ತ್ರಚಿಕಿತ್ಸಾಹ ಶಿಬಿರ ಮತ್ತು ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ನಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಬಿಪಿ ಶುಗರ್ ಪರೀಕ್ಷೆ ನೆರವೇರಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕಡಬ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯ ಧಾರ್ಮಿಕ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ ರವರು ಗ್ರಾಮೀಣ ಭಾಗದಲ್ಲಿ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇಂತಹ ಶಿಬಿರ ವರದಾನವಾಗಿದೆ ಕಣ್ಣಿನ ಪೊರೆಯಿಂದ ಬಳಲುತ್ತಿರುವ ಸಾರ್ವಜನಿಕ ಬಂಧುಗಳಿಗೆ ಇಂತಹ ಶಿಬಿರಗಳು ಬೆಳಕನ್ನು ಕೊಡುವ ಮೂಲಕ ಒಂದು ಅರ್ಥಪೂರ್ಣವಾದ ಸಮಾಜ ಸೇವೆಯನ್ನು ಮಾಡಿದ ಪುಣ್ಯವನ್ನು ನಮ್ಮ ಜೀವನದಲ್ಲಿ ಗಳಿಸಿದ ಹಾಗೆ ಆಗುತ್ತದೆ ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳನ್ನು ಜೋಡಿಸಿಕೊಂಡು ತನ್ನ 50ನೇ ಕಣ್ಣಿನ ಶಿಬಿರವನ್ನು ಗಂಗಾಧರ ಶೆಟ್ಟಿ ಹೊಸಮನೆ ರವರ 50 ನೇ ಕಣ್ಣಿನ ಶಿಬಿರ ತಾನು ಕಲಿತ ಪಡುಬಿಟ್ಟು ಶಾಲೆಯಲ್ಲಿ ಸಂಘಟಿಸಿದ್ದು ಅತ್ಯಂತ ಯೋಗ್ಯ ಕೆಲಸವಾಗಿದೆ ಎಂದು ಹೇಳಿದರು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಈವರೆಗಿನ 50 ಶಿಬಿರಗಳಲ್ಲಿ ಭಾಗವಹಿಸಿ ಉಚಿತ ಕನ್ನಡಕ ವಿತರಣೆಗಳನ್ನು ಮಾಡಿ ವಿಶೇಷ ಪ್ರೋತ್ಸಾಹವನ್ನು ನೀಡಿದ ಡಾ.ಗೌರಿ ಪೈ, ಡಾ. ಶಾಂತರಾಜ್, ಡಾ.ಅನಿಲ್ ರಾಮಾನುಜಂ, ಖ್ಯಾತ ಕ್ಯಾನ್ಸರ್ ತಜ್ಞ ಡಾಕ್ಟರ್ ರಘು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಕಡಬ ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣಶೆಟ್ಟಿ ಕಡಬ ಮತ್ತು ಸುಳ್ಯ ಡಾ.ಶಾಂತರಾಜ್ ಕ್ಷೇತ್ರದ ವಿಧಾನಸಭಾ ಅಭ್ಯರ್ಥಿ ಕೃಷ್ಣಪ್ಪ.ಜಿ ರವರುಗಳನ್ನು ಸನ್ಮಾನಿಸಲಾಯಿತು.
ನೇತ್ರಾಧಿಕಾರಿ ಡಾ.ಶಾಂತರಾಜ್ ರವರು ಶಿಬಿರದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾದ ನಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ರವರು ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿ ಸನ್ಮಾನಿತರಾದ ಡಾ.ರಘು ಬೆಳ್ಳಿಪಾಡಿ ರವರು ಮಾತನಾಡಿ ಗಂಗಾಧರ ಶೆಟ್ಟಿಯವರ ಪ್ರಥಮ ಕಣ್ಣಿನ ಶಿಬಿರವನ್ನು ನಾನು ಪಡುಬೆಟ್ಟು ಶಾಲೆಯಲ್ಲಿ ಉದ್ಘಾಟನೆಯನ್ನು ಮಾಡಿದ್ದೆ ಇಂದು 50 ನೇ ಶಿಬಿರದಲ್ಲಿ ಪಾಲ್ಗೊಂಡಿರುವುದು ನನಗೆ ಸಂತಸವನ್ನು ತಂದಿದೆ, ಶೆಟ್ಟಿಯವರು 100 ಶಿಬಿರಗಳನ್ನು ಮಾಡಿ ರಾಜ್ಯ ಪ್ರಶಸ್ತಿಯನ್ನು ಪಡೆಯುವಂತಾಗಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಉದ್ಯಮಿ ಸಮಾಜ ಸೇವಕ ಕೃಷ್ಣಪ್ಪ.ಜಿ ರವರು ಮಾತನಾಡಿ ಸೇವೆಯನ್ನು ಮಾಡಬೇಕು ಎಂದು ನಾವು ನಿಶ್ಚಯಿಸಿದಾಗ ಯಾವುದೇ ಕ್ಷೇತ್ರದಲ್ಲಿಯೂ ಅವಕಾಶವಿದೆ ಗಂಗಾಧರ ಶೆಟ್ಟಿಯವರು ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಎರಡರಲ್ಲೂ ಸೇವಾ ಮನೋಭಾವವನ್ನು ಇಟ್ಟುಕೊಂಡು ಜನಸೇವೆ ಮಾಡಿದ್ದಾರೆ ಇವರ ಸೇವೆ ದೇವರು ಮೆಚ್ಚುವ ಕೆಲಸವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಲಯನ್ಸ್ ಕ್ಲಬ್ ದುರ್ಗಾಂಬ ಅಲಂಕಾರ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ಗುತ್ತು ರವರು ಮಾತನಾಡಿ ನಮ್ಮ ಲಯನ್ಸ್ ಸಂಸ್ಥೆ ಸೇವೆಯಲ್ಲಿ ಉನ್ನತ ಸ್ಥಾನವನ್ನು ಪಡೆದಿದೆ, ಈ ವರ್ಷದಲ್ಲಿ ಅನೇಕ ಕಣ್ಣಿನ ಶಿಬಿರಗಳು ಆರೋಗ್ಯ ಶಿಬಿರಗಳು ಬೇರೆ ಬೇರೆ ರೀತಿಯ ಸಾಮಾಜಿಕ ಸೇವಾ ಕಾರ್ಯಗಳು ನಮ್ಮ ಸಂಸ್ಥೆಯ ಮೂಲಕ ನಡೆದಿದೆ. ಗಂಗಾಧರ ಶೆಟ್ಟಿಯವರು ನಮ್ಮ ಸಂಸ್ಥೆಯ ಜೊತೆಗೂಡಿ ಅನೇಕ ಶಿಬಿರಗಳನ್ನು ಸಂಘಟಿಸಿದ್ದಾರೆ ಅವರ ಪ್ರಾಮಾಣಿಕವಾದ ಜನ ಸೇವೆ ಶ್ಲಾಘನೀಯವಾಗಿದೆ. ಈ ಶಿಬಿರದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಜೆಸಿಐ ಸಂಸ್ಥೆಯ ಅಧ್ಯಕ್ಷ ನೆಲ್ಯಾಡಿ ಸೇವಾ ಸಹಕಾರಿ ಬ್ಯಾಂಕನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಲಗುತ್ತು, ಶಾಲಾ ಮುಖ್ಯಗುರು ಶ್ರೀಮತಿ ಜೆಸ್ಸಿ, ಶಾಲಾಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರವರುಗಳು ಉಪಸ್ಥಿತರಿದ್ದರು.
150ಕ್ಕೂ ಮಿಕ್ಕಿ ಸಾರ್ವಜನಿಕರು ತಪಾಸಣೆಯನ್ನು ಮಾಡಿಸಿಕೊಂಡರು. 120ಕ್ಕೂ ಮಿಕ್ಕಿ ಉಚಿತ ಕನ್ನಡಕಗಳನ್ನು ಆನಂದ ಶ್ರಮದ ಮೂಲಕ ವಿತರಿಸಲಾಯಿತು. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ 8 ಜನರನ್ನು ವೆನ್ ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ಶಿಬಿರದಲ್ಲಿ ಶಾಲಾ ಮಕ್ಕಳನ್ನು ನೇತ್ರ ತಪಾಸಣೆಗೆ ಒಳಪಡಿಸಲಾಯಿತು. 50ನೇ ಶಿಬಿರದ ಸಂಘಟಕ ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ ರವರು ಸ್ವಾಗತಿಸಿದರು. ಜೆಸಿಐ ಸಂಸ್ಥೆಯ ಅಧ್ಯಕ್ಷ ದಯಾಕರ ರೈ ಮುಂಡಾಲಗುತ್ತು ರವರು ವಂದಿಸಿದರು.