ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಟಿವಿಗಳು ಮತ್ತು ಟ್ಯಾಬ್ಲೆಟ್‌ಗಳವರೆಗೆ ನಮ್ಮ ಕಣ್ಣುಗಳು ನಿರಂತರವಾಗಿ ಸ್ಕ್ರೀನ್ನ ಬೆಳಕಿಗೆ ಒಗ್ಗಿಕೊಂಡಿರುತ್ತದೆ. ಇದು ನಮ್ಮ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ.
ಕಂಪ್ಯೂಟರ್, ಮೊಬೈಲ್ ಒತ್ತಡದಿಂದ ನಮ್ಮ ಕಣ್ಣನ್ನು ಕಾಪಾಡುವುದು ಹೇಗೆ?
ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ನಮ್ಮ ಗ್ಯಾಜೆಟ್‌ಗಳಿಲ್ಲದೆ ಏನನ್ನೂ ಮಾಡಲಾಗದಂತಹ ಅನಿವಾರ್ಯತೆಯನ್ನು ನಾವೇ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಮೊಬೈಲ್,. ಲ್ಯಾಪ್ಟಾಪ್, ಟಿವಿ, ನೋಟ್ಬುಕ್, ಐಪಾಡ್ ಹೀಗೆ ನಾನಾ ರೀತಿಯ ಡಿಜಿಟಲ್ ವಸ್ತುಗಳನ್ನು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ಟಿವಿಗಳು ಮತ್ತು ಟ್ಯಾಬ್ಲೆಟ್‌ಗಳವರೆಗೆ ನಮ್ಮ ಕಣ್ಣುಗಳು ನಿರಂತರವಾಗಿ ಸ್ಕ್ರೀನ್ನ ಬೆಳಕಿಗೆ ಒಗ್ಗಿಕೊಂಡಿರುತ್ತದೆ. ಇದು ನಮ್ಮ ಕಣ್ಣುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಆಫೀಸ್ ಕೆಲಸ ಮಾಡುವವರು ದಿನದಲ್ಲಿ 9ರಿಂದ 10 ಗಂಟೆಗಳ ಕಾಲ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತಿರಬೇಕಾದ ಅನಿವಾರ್ಯತೆ ಇದೆ. ಇದರ ಜೊತೆಗೆ ಮೊಬೈಲ್ ನೋಡುವುದು ಪ್ರತ್ಯೇಕ ಅಭ್ಯಾಸ. ಹೀಗಿರುವಾಗ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?
ಡಿಜಿಟಲ್ ವಸ್ತುಗಳನ್ನು ವೀಕ್ಷಿಸುವುದರಿಂದ ಈ ಸಮಸ್ಯೆಗಳು ಎದುರಾಗಬಹುದು.
– ಕಣ್ಣುಗಳು ಒಣಗುವುದು
– ಮಂದ ದೃಷ್ಟಿ
– ತಲೆನೋವು
– ಕುತ್ತಿಗೆ ನೋವು
– ಕಣ್ಣಿನ ಆಯಾಸ
ಈ ಅಹಿತಕರ ಲಕ್ಷಣಗಳನ್ನು ತಡೆಗಟ್ಟಲು ಮತ್ತು ಡಿಜಿಟಲ್ ಒತ್ತಡದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಕೆಲವು ಸಲಹೆಗಳು ಇಲ್ಲಿವೆ. ಡಿಜಿಟಲ್ ಸ್ಟ್ರೈನ್ನಿಂದ ಕಣ್ಣುಗಳನ್ನು ರಕ್ಷಿಸಲು 5 ಸಲಹೆಗಳು ಇಲ್ಲಿವೆ.
20-20-20 ನಿಯಮವನ್ನು ಅನುಸರಿಸಿ:
ಪ್ರತಿ 20 ನಿಮಿಷಗಳಿಗೊಮ್ಮೆ ಕನಿಷ್ಠ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಿ. ಇದು ನಿಮ್ಮ ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಪರದೆಯ ಸೆಟ್ಟಿಂಗ್‌ಗಳನ್ನು ಹೊಂದಿಸಿ:
ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ನ ಬ್ರೈಟ್ನೆಸ್ ಮತ್ತು ಕಾಂಟ್ರಾಸ್ಟ್ ಅನ್ನು ಆರಾಮದಾಯಕ ಮಟ್ಟಕ್ಕೆ ಅಡ್ಜಸ್ಟ್ ಮಾಡಿ. ನಿಮ್ಮ ಸಿಸ್ಟಂನಲ್ಲಿ ರಾತ್ರಿ ಮೋಡ್ ಸೆಟ್ಟಿಂಗ್‌ಗಳನ್ನು ಸಹ ನೀವು ಆ್ಯಕ್ಟಿವ್ ಮಾಡಿಕೊಳ್ಳಬಹುದು. ಇದು ಕಣ್ಣುಗಳ ಮೇಲೆ ಕಡಿಮೆ ಒತ್ತಡ ಉಂಟುಮಾಡುತ್ತದೆ.
ವಿರಾಮಗಳನ್ನು ತೆಗೆದುಕೊಳ್ಳಿ ಮತ್ತು ಆಗಾಗ ಕಣ್ಣು ಮಿಟುಕಿಸಿ:
ಡಿಜಿಟಲ್ ಸಾಧನಗಳನ್ನು ಬಳಸುವಾಗ ದಿನವಿಡೀ ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ಆಗಾಗ ಎದ್ದು ತಿರುಗಿ, ನಿಮ್ಮ ಕಾಲುಗಳನ್ನು ಹಿಗ್ಗಿಸಿ ಮತ್ತು ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ಸಿಸ್ಟಂ ನೋಡುವಾಗ ದಿಟ್ಟಿಸಿ ನೋಡುತ್ತಿರುವ ಬದಲು ಆಗಾಗ ಕಣ್ಣು ಮಿಟುಕಿಸಲು ಮರೆಯಬೇಡಿ.
ನಿಮ್ಮ ಕಾರ್ಯಕ್ಷೇತ್ರವನ್ನು ಸುಧಾರಿಸಿ:
ನಿಮ್ಮ ಕಂಪ್ಯೂಟರ್ ಪರದೆಯನ್ನು ನಿಮ್ಮ ಕಣ್ಣುಗಳಿಂದ ಒಂದು ತೋಳಿನ ದೂರದಲ್ಲಿ ಮತ್ತು ಕಣ್ಣಿನ ಮಟ್ಟಕ್ಕಿಂತ ಸ್ವಲ್ಪ ಕೆಳಗೆ ಇರಿಸಿ. ಇದು ಕುತ್ತಿಗೆಯ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕಣ್ಣುಗಳು ಹೆಚ್ಚು ಗಮನಹರಿಸದಂತೆ ಮಾಡುತ್ತದೆ. ಕಂಪ್ಯೂಟರ್ ಮೇಲೆ ಸರಿಯಾಗಿ ಬೆಳಕು ಬೀಳುವಂತಿರಲಿ. ಇದರಿಂದ ಕಣ್ಣಿಗೆ ಆಯಾಸವಾಗುವುದಿಲ್ಲ.