ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆಯಲ್ಲಿ ಸಂಸ್ಕಾರಯುತ ಜೀವನ ಎಂಬ ವಿಷಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ಸಮಾಜಿಕ- ಧಾರ್ಮಿಕ ಚಿಂತಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ಮಾತನಾಡುತ್ತಾ “ವಿದ್ಯಾರ್ಥಿಗಳು ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು. ಗುರುಗಳು ನಮ್ಮ ಭವಿಷ್ಯಕ್ಕಾಗಿ ಸದಾ ಕಾರ್ಯಪ್ರವೃತ್ತರಾಗಿರುವವರು. ಅವರಿಗೆ ಗೌರವವನ್ನು ನಾವು ನೀಡಿ ಶಿಕ್ಷಣದ ನಿಜವಾದ ಉದ್ದೇಶವನ್ನು ಪೂರೈಸಬೇಕು. ಹೆತ್ತವರಿಗೆ ಗೌರವ ನೀಡಿ ಅವರ ಕೊನೆಯ ಕಾಲದಲ್ಲಿ ಅವರೊಂದಿಗೆ ಇರುವ ಮಕ್ಕಳು ನಾವಾಗಬೇಕು.ನಾವು ಪ್ರಕೃತಿಯಂತೆ ಇರಬೇಕು. ಭೂಮಿಯ ತಾಳ್ಮೆ, ಬೆಂಕಿಯಂತೆ ಎಲ್ಲವನ್ನೂ ಸ್ವೀಕರಿಸುವ ಶಕ್ತಿ, ನೀರಿನಂತೆ ಪಾರದರ್ಶಕತೆ,ಸೂರ್ಯನಂತೆ ಪ್ರಕಾಶಿಸುವಿಕೆ, ಚಂದ್ರನಂತೆ ಬೆಳವಣಿಗೆ ಇವೆಲ್ಲವೂ ನಾವು ಅಳವಡಿಸಿಕೊಳ್ಳಬೇಕಾದ ವಿಷಯಗಳು. ಯಾವುದೇ ಆಕರ್ಷಣೆಗಳಿಗೆ ಅಂಟಿಕೊಳ್ಳದೆ ಸಾಧನೆಯ ಕಡೆಗೆ ಮಾತ್ರ ನಮ್ಮ ಗಮನ ಇರಬೇಕು” ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಯಾದ ರಾಧಾಕೃಷ್ಣ.ಕೆ.ಎಸ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಚಂದ್ರಶೇಖರ.ಕೆ ಧನ್ಯವಾದ ಸಮರ್ಪಿಸಿದರು. ಪ್ರೌಢಶಾಲೆಯ ಮುಖ್ಯಗುರುಗಳಾದ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.