ಪೆರ್ನಾಜೆ ಬಳಿ ಕೃಷಿತೋಟಕ್ಕೆ ಒಂಟಿಸಲಗ ದಾಳಿ ಮಾಡಿದ್ದು, ಅಪಾರ ನಷ್ಟ ಸಂಭಸಿದೆ ತೋಟದಲ್ಲಿದ್ದ ಅಡಿಕೆ, ಬಾಳೆ, ತೆಂಗು ಗಿಡಗಳು ನಾಶಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪುತ್ತೂರು ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ತೀವ್ರಗೊಂಡಿದ್ದು ಜನತೆ ಅದರಲ್ಲೂ ಕೃಷಿಕರು ಆನೆ ದಾಳಿಯಿಂದ ಕಂಗಲಾಗಿದ್ದಾರೆ. ಪುತ್ತೂರಿನ ಪೆರ್ನಾಜೆ ಎಂಬಲ್ಲಿ ಬುಧವಾರ ತಡರಾತ್ರಿ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಗಿಡ ಮರಗಳನ್ನು ನಾಶ ಮಾಡಿದೆ.
ಈ ಭಾಗದಲ್ಲಿ ಕಾಡಾನೆ ಇದೇ ಮೊದಲ ಬಾರಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ತೋಟದಲ್ಲಿದ್ದ ಅಡಿಕೆ, ಬಾಳೆ, ತೆಂಗು ಗಿಡಗಳು ಸರ್ವ ನಾಶವಾಗಿದೆ. ಕೃಷಿಕರು ಆತಂಕಕ್ಕೊಳಗಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.