ನೆಲ್ಯಾಡಿ: ಲಹರಿ ಸಂಗೀತ ಕಲಾ ಕೇಂದ್ರ 2ನೇ ವರುಷದ ವಾರ್ಷಿಕೋತ್ಸವ “ರಾಗಾಂತರಂಗ” ಕಾರ್ಯಕ್ರಮ ಫೆ.17ರಂದು ನೆಲ್ಯಾಡಿಯ ದುರ್ಗಾ ಶ್ರೀ ಟವರ್ಸ್ ಬಳಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಕಡಬ ತಾಲೂಕಿನ ಉಪತಹಶೀಲ್ದಾರರಾದ ಗೋಪಾಲ. ಕೆ, ಅಧ್ಯಕ್ಷತೆಯನ್ನು ಸತೀಶ್ ಕೆ.ಎಸ್, ದುರ್ಗಾ ಶ್ರೀ ನೆಲ್ಯಾಡಿ, ಅಬ್ಯಾಗತರಾಗಿ ನೆಲ್ಯಾಡಿ ಸೈಂಟ್ ಆಲ್ಫೋನ್ಸಾ ಚರ್ಚ್ ನ ಧರ್ಮಗುರುಗಳಾದ ರೆ|ಫಾ|ಶಾಜಿ ಮ್ಯಾಥ್ಯು, ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಸುಚಿತ್ರಾ.ಜೆ ಬಂಟ್ರಿಯಾಲ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಕ್ಷಿಪ್ತ ನಿತ್ಯ ಕಲಾ ಶಾಲೆ ನೆಲ್ಯಾಡಿ – ಮಂಗಳೂರು ಇದರ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಸುರೇಖಾ ಹರೀಶ್ ಅವರಿಗೆ “ಲಹರಿ ಸಾಧಕರತ್ನ ಪ್ರಶಸ್ತಿ” ಪ್ರಧಾನ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ವಾನ್ ಶ್ರೀಕಾಂತ ಕುಂಞಣ್ಣಾಯ ಸಂಗೀತ ಗುರುಗಳು ಕುದ್ಮಾರು. ಡಾ.ರಾಮಕೃಷ್ಣ ಭಟ್ ಅಂಜರ ಆಯುರ್ವೇದ ವೈದ್ಯರು, ಸಂಗೀತ ಕಲಾವಿದರು. ಶ್ರೀಮತಿ ಕಮಲ ಇಚ್ಲಂಪಾಡಿ ದೈವಾರಾಧನೆ ಪಾಡ್ದನ. ಜೆ.ಮಾಧವ ಆಚಾರ್ಯ ಬಲ್ಯ, ಹಾರ್ಮೋನಿಯಂ ಕಲಾವಿದರು. ಸುಂದರ ಗೌಡ ಯಕ್ಷಗುರುಗಳು, ಲತೀಶ್ ಯಕ್ಷಗಾನ ಕಲಾಕೇಂದ್ರ ಅರಸಿನಮಕ್ಕಿ ಇವರುಗಳನ್ನು ಸನ್ಮಾನಿಸಲಾಗುವುದು. ಬಳಿಕ ವೇದಿಕೆಯಲ್ಲಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಸುಗಮ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ.
ವಿ.ಕೆ.ಜೋಡಿ ತಾರೆ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಕೃಷ್ಣರಾಜ್ ಸುಳ್ಯ ಇವರಿಂದ ನಿರೂಪಣೆಗೊಳ್ಳಲಿದೆ ಎಂದು ಕಲಾ ಕೇಂದ್ರದ ಸಂಗೀತ ಗುರುಗಳಾದ ವಿಶ್ವನಾಥ ಶೆಟ್ಟಿ.ಕೆ ತಿಳಿಸಿದರು.