ಶಿರ್ಲಾಲು ಸೂಡಿ ಬಸದಿಯಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿದ ಗುಣಪಾಲ ಹೆಗ್ಡೆ

ಶೇರ್ ಮಾಡಿ

ಕಾರ್ಕಳ ಸಮೀಪದ ಶಿರ್ಲಾಲು ಸೂಡಿ 1008 ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಪೂರ್ವಕ ನೂತನ ಬಸದಿಯ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಬೆಳಗಾವಿಯ ಉದ್ಯಮಿ, ದಾನಿ ಶಿರ್ಲಾಲು ಬಿ.ಗುಣಪಾಲ ಹೆಗ್ಡೆಯವರನ್ನು ಸನ್ಮಾನಿಸಲಾಯಿತು.

ಹುಟ್ಟೂರ ಬಸದಿಯ ಪಂಚಕಲ್ಯಾಣ ಮಹೋತ್ಸವದಲ್ಲಿ 108 ಶ್ರೀ ಅಮೋಘ ಕೀರ್ತಿ ಮುನಿ ಮಹಾರಾಜರು, 108 ಶ್ರೀ ಅಮರ ಕೀರ್ತಿ ಮುನಿ ಮಹಾರಾಜರ ಪಾವನ ಸಾನ್ನಿಧ್ಯ ಹಾಗೂ ಮಾಜಿ ಸಚಿವ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಅವರು ಶಿರ್ಲಾಲು ಸೂಡಿ ಆದಿನಾಥ ಸ್ವಾಮಿ ಬಸದಿಯ ಸೇವಾ ಕಾರ್ಯಕ್ಕೆ ದಾನಿ ಗುಣಪಾಲ ಹೆಗ್ಡೆಯವರು ನೀಡಿದ ಸೇವಾ ಕಾರ್ಯವನ್ನು ನೆನಪಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಬಸದಿಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Leave a Reply

error: Content is protected !!