ನೇಸರ ಫೆ.7: ಉಪ್ಪಿನಂಗಡಿ ಜೇಸಿಐ ಘಟಕದ 44 ನೇ ವರ್ಷದ ಪದಪ್ರಧಾನ ಕಾರ್ಯಕ್ರಮವು ರೋಟರಿ ಭವನ ಉಪ್ಪಿನಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾಲೂಕು ಪಂಚಾಯಿತ್ ಪುತ್ತೂರು ಇದರ ನಿಕಟಪೂರ್ವ ಸದಸ್ಯರಾದ ಮುಕುಂದ ಬಜತ್ತೂರು ಮಾತನಾಡಿ ಜೇಸಿ ಸಂಸ್ಥೆ ಸಮಾಜದ ಯೋಗ್ಯ ವ್ಯಕ್ತಿತ್ವದ ವ್ಯಕ್ತಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.ಇದರಲ್ಲಿ ಯುವ ಜನತೆ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಈ ಘಟಕ ಸ್ಥಾಪನೆಗೊಂಡು 43 ವರ್ಷಗಳು ಕಳೆದಿವೆ.ಇಂತಹ ಸಂಸ್ಥೆಯು ತನ್ನ ಚಟುವಟಿಕೆಗಳನ್ನು ಮಾಡಲು ಸ್ವಂತ ಕಟ್ಟಡ ನಿರ್ಮಾಣದ ಕಡೆಗೆ ವಿಶೇಷ ಗಮನ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರು ಜೇಸಿ.ಕೆ.ವಿಶ್ವನಾಥ ಕುಲಾಲ್ ರವರು ತನ್ನೊಡನೆ ಸಹಕರಿಸಿದ ಎಲ್ಲಾ ಜೇಸಿ ಮಿತ್ರರಿಗೆ ನೆನಪಿನ ಕಾಣಿಕೆಯನ್ನಿತ್ತು ಗೌರವಿಸಿದರು.
ನಿಕಟಪೂರ್ವ ಅಧ್ಯಕ್ಷ ಶ್ರೀ ಶಶಿಧರ್ ನೆಕ್ಕಿಲಾಡಿ ಯವರನ್ನು ಪೂರ್ವಾಧ್ಯಕ್ಷ ಸಾಲಿಗೆ ಜೇಸಿ. ಗೋವಿಂದ ಪ್ರಸಾದ್ ಕಜೆ,ಗೌರವಾರ್ಪಣೆ ನೀಡಿ ಸೇರಿಸಿದರು.
2022ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಕಿರುಪರಿಚಯ ಮತ್ತು ಹುದ್ದೆ ಹಸ್ತಾಂತರ ನೆರವೇರಿತು.ಜೇಸಿಐ ವಲಯ 15ರ ವಲಯಾಧ್ಯಕ್ಷ ರಾಯನ್ ಉದಯ ಕ್ರಾಸ್ತ ರವರು ನಡೆಸಿಕೊಟ್ಟರು.ಘಟಕಕ್ಕೆ ಪುನೀತ್ ಮಂಜಿಪಲ್ಲ,ಪ್ರವೀಣ ಪಿಂಟೊ ಪುಯಿಲ,ಮನೋಜ್ ಕುಮಾರ್ ಆಗರ್ತಿಮಾರ್,ಪುರುಷೋತ್ತಮ ತೋಟದಮನೆ ಪದಕ,ಮಹೇಶ್ ಖಂಡಿಕ,ನವೀನ್ ಲಸ್ರದೋ ಪುಯಿಲ ಮತ್ತು ದಿವಾಕರ ಶಾಂತಿನಗರ ಹೀಗೆ ಏಳು ಮಂದಿ ನೂತನ ಸದಸ್ಯರು ಜೇಸಿಐಗೆ ಸೇರ್ಪಡೆಯಾದರು.
ಗಣರಾಜ್ಯೋತ್ಸವದ ಅಂಗವಾಗಿ ತಾಲೂಕು ಪಂಚಾಯತ್ ಪುತ್ತೂರು ಸದಸ್ಯರಾದ ಮುಕುಂದ ಇವರ ಉತ್ತಮ ಸೇವೆಗಾಗಿ ಹಾಗೂ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ,ಅಮೆರಿಕಾದ NGO ನೀಡುವ ಸ್ಕಾಲರ್ ಶಿಪ್ ಗೆ ಆಯ್ಕೆಯಾದ ಜೆಜೇಸಿ.ಸ್ಮಿತಾರವರನ್ನು ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
ಉಪ್ಪಿನಂಗಡಿ ಘಟಕದ ನೂತನ ಅಧ್ಯಕ್ಷರಾದ ಜೇಸಿ.ಮೋಹನ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು.ವಲಯ ಉಪಾಧ್ಯಕ್ಷರಾದ ಜೇಸಿ.ದೀಪಕ್ ಗಂಗೂಲಿ,ನಿರ್ಗಮಿತ ಅಧ್ಯಕ್ಷರಾದ ಜೇಸಿ.ಕೆ.ವಿ.ಕುಲಾಲ್,ಕಾರ್ಯದರ್ಶಿ ಜೇಸಿ.ಲವೀನಾ ಪಿಂಟೊ,ಜೆಜೇಸಿ ಶ್ರೀರಕ್ಷಾ,ಡಾ. ರಾಜಾರಾಮ್,ವಿಜಯಕುಮಾರ್ ಕಲ್ಲಳಿಕೆ,ರವೀಂದ್ರ ದರ್ಬೆ, ಪ್ರಶಾಂತ್ ಕುಮಾರ್ ರೈ ,ಜಯಪ್ರಕಾಶ್ ಶೆಟ್ಟಿ,ಕೇಶವ ರಂಗಾಜೆ,ಉಮೇಶ ಆಚಾರ್ಯ,ಮೋನಪ್ಪ ಪಮ್ಮನಮಜಲು ,ಡಾ.ನಿರಂಜನ್ ರೈ,ಪುರುಷೋತ್ತಮ್ ಶೆಟ್ಟಿ, ಜಗನ್ನಾಥ ರೈ,ವೀಣಾ ಪ್ರಸಾದ್ ಕಜೆ, ರಾಜಗೋಪಾಲ್ ಕೈಲಾರ್,ಜಯಂತಿ ರಂಗಾಜೆ,ಅವನೀಶ್,ಪದ್ಮಪ್ಪ ಪೂಜಾರಿ,ಕುಶಾಲಪ್ಪ, ಸುರೇಶ್, ಶೇಖರ್,ಕಿಶೋರ್,ಗುಣಾಕರ್,ಚಂದ್ರಶೇಖರ್ ಶೆಟ್ಟಿ,ಗಣೇಶ ಕಟ್ಟಪುಣಿ , ಪ್ರದೀಪ್ ಬಾಕಿಲ,ಮಮತ,ಕೊಕ್ಕಡ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.ಜೇಸಿ.ಕೆ.ವಿಶ್ವನಾಥ ಕುಲಾಲ್ ಸ್ವಾಗತಿಸಿ,ಕಾರ್ಯದರ್ಶಿ ಜೇಸಿ.ಲವೀನಾ ಪಿಂಟೊ ವಂದಿಸಿದರು.