ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಕಡಬ ತಾಲೂಕು ನೆಲ್ಯಾಡಿ ವಲಯ ಅಧ್ಯಕ್ಷರು ಮತ್ತು ಸೇವಾಪ್ರತಿನಿಧಿಗಳ ಸಭೆಯು ಹೊಸಮಜಲು ಶಾಲೆಯಲ್ಲಿ ನಡೆಯಿತು.
ನೆಲ್ಯಾಡಿ ವಲಯದ ಅಧ್ಯಕ್ಷ ಕುಶಾಲಪ್ಪ ಗೌಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾ ಜಯಾನಂದ ಬಂಟ್ರಿಯಾಲ್, ಕಡಬ ತಾಲೂಕು ನೋಡೆಲ್ ಅಧಿಕಾರಿ ರಕ್ಷಕ್, ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಥಿಕ ವರ್ಷದಲ್ಲಿ ನೆಲ್ಯಾಡಿ ವಲಯದಲ್ಲಿ ಒಟ್ಟು 15 ಜನ ಸದಸ್ಯರಿಗೆ ಮಾಸಾಶನ ಸಹಾಯಧನ, ಪ್ರಾಕೃತಿಕ ವಿಕೋಪದಿಂದ ಹಾನಿಯಾದ 13 ಸದಸ್ಯರಿಗೆ ಸಹಾಯಧನ, ಅನಾರೋಗ್ಯದಿಂದ ಬಳಲುತ್ತಿರುವ 3 ಸದಸ್ಯರಿಗೆ ಸಹಾಯಧನವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀಡಿರುವ ಬಗ್ಗೆ ಹಾಗೆಯೇ ಯೋಜನೆಯ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ವಲಯ ಮೇಲ್ವಿಚಾರಕ ವಿಜೇಶ್ ಜೈನ್ ಅವರು ತಿಳಿಸಿದರು. ಸಭೆಯಲ್ಲಿ “ಮತದಾನ ನಮ್ಮ ಹಕ್ಕು” ಕರಪತ್ರ ಬಿಡುಗಡೆಯನ್ನು ಮಾಡಲಾಯಿತು.
ನೆಲ್ಯಾಡಿ ಜನಜಾಗೃತಿ ಸದಸ್ಯ ತುಕಾರಾಮ ರೈ, ವಲಯದ ಅಧ್ಯಕ್ಷರುಗಳು, ಸೇವಾಪ್ರತಿನಿಧಿಗಳು, ವಲಯದ ಸಾಮಾನ್ಯ ಸೇವಾ ಕೇಂದ್ರದ ವಿ.ಎಲ್.ಇ ಉಪಸ್ಥಿತರಿದ್ದರು. ಹೇಮಾವತಿ.ಜೆ ಸ್ವಾಗತಿಸಿ, ಸೇವಾಪ್ರತಿನಿಧಿ ನಮಿತಾ ಶೆಟ್ಟಿ ನಿರೂಪಿಸಿದರು. ವೇದಾ.ಪಿ ವಂದಿಸಿದರು.