ಶಿಬಾಜೆ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿ ಚಲಿಸಿದ ಪಿಕಪ್ ವಾಹನ- ಕಾರ್ಮಿಕ ಸಾವು

ಶೇರ್ ಮಾಡಿ

ಕೊಕ್ಕಡ: ಶಿಬಾಜೆಯಲ್ಲಿ ಪಿಕಪ್ ವಾಹನದ ಚಾಲಕ ವಾಹನವನ್ನು ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ವೇಳೆ ತನ್ನ ಮಕ್ಕಳ ಮುಂದೆಯೇ ಅಪಘಾತ ನಡೆದು ದಾರುಣಾವಾಗಿ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶಿಬಾಜೆ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ರುಕ್ಮ ಮುಗೇರ(50 ವರ್ಷ) ಎಂದು ಗುರುತಿಸಲಾಗಿದೆ.

ಮೃತರು ತನ್ನ ಮಕ್ಕಳೊಂದಿಗೆ ಗೊಬ್ಬರ ಲೋಡ್ ಮಾಡಲೆಂದು ಜಯೇಶ್ ಎಂಬವರ ಪಿಕಪ್ ವಾಹನದಲ್ಲಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಿಕಪ್ ನಿಲ್ಲಿಸಿ ಅದರಲ್ಲಿದ್ದ ರುಕ್ಮ ಮುಗೇರ ಹಾಗೂ ಇತರರು ಪಿಕಪ್ ನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ‌ ಪಿಕಪ್ ಚಾಲಕ ವಾಹನವನ್ನು ಅಜಾಗರೂಕತೆಯಿಂದ ಒಮ್ಮೆಲೇ ಹಿಂದಕ್ಕೆ ಚಲಾಯಿಸಿದ ವೇಳೆ ರಸ್ತೆಯ ಬದಿಯಲ್ಲಿ ನಿಂತಿದ್ದ ರುಕ್ಮ ಮುಗೇರ ಅವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆ ಬಿದ್ದು ಅವರು ಗಂಭೀರ ಗಾಯಗೊಂಡಿದ್ದು. ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಯ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ನೋಣಮ್ಮ, ಮಕ್ಕಳು ಉಪೇಂದ್ರ, ಹರೀಶ, ಹರೀಣಾಕ್ಷಿ ಅವರನ್ನು ಅಗಲಿದ್ದಾರ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.

Leave a Reply

error: Content is protected !!