ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ,ಸಂಸ್ಕರಣ ಸಹಕಾರಿ ಸಂಘದ ಉಪ ಖರೀದಿ ಕೇಂದ್ರ ಶುಭಾರಂಭ.

ಶೇರ್ ಮಾಡಿ

ನೇಸರ ಫೆ.11: ನೆಲ್ಯಾಡಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಉಪ ಖರೀದಿ ಕೇಂದ್ರ ನೆಲ್ಯಾಡಿಯಲ್ಲಿ ಸೈಂಟ್ ಮೇರೀಸ್ ಕಾಂಪ್ಲೆಕ್ಸ್‌ನಲ್ಲಿ ಫೆ.11ರಂದು ಬೆಳಿಗ್ಗೆ ಶುಭಾರಂಭಗೊಂಡಿತು.

ಸಂಘದ ಅಧ್ಯಕ್ಷ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ 33 ವರ್ಷಗಳ ಹಿಂದೆ ಆರಂಭಗೊಂಡಿ ರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘವು ಆರ್ಥಿಕವಾಗಿ ಬಲಿಷ್ಠಗೊಂಡು ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘವಾಗಿ ಬೆಳೆದು ನಿಂತಿದೆ. ಇದಕ್ಕೆಲ್ಲಾ ಸಂಘದ ಸದಸ್ಯರು ಹಾಗೂ ರಬ್ಬರ್ ಬೆಳೆಗಾರರೇ ಪ್ರಮುಖ ಕಾರಣವಾಗಿದ್ದಾರೆ. ಸಂಘಕ್ಕೆ ನೆಲ್ಯಾಡಿಯಲ್ಲಿ ಮುಖ್ಯ ಕಚೇರಿ ಇದ್ದು ಪುತ್ತೂರು, ಕಡಬ, ಈಶ್ವರಮಂಗಲದಲ್ಲಿ ಶಾಖೆ ಇದೆ. ಕೆಯ್ಯೂರು, ಇಚ್ಲಂಪಾಡಿಯಲ್ಲಿ ರಬ್ಬರ್ ಖರೀದಿ ಕೇಂದ್ರಗಳಿವೆ. ಇದೀಗ ರಬ್ಬರ್ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆಲ್ಯಾಡಿಯಲ್ಲಿ ಹೈವೆಗೆ ಹೊಂದಿಕೊಂಡಂತೆ ಬಸ್‌ನಿಲ್ದಾಣ ಹಾಗೂ ಜೀಪು ನಿಲ್ದಾಣಕ್ಕೆ ಅತೀ ಸಮೀಪದಲ್ಲೇ ಉಪಖರೀದಿ ಕೇಂದ್ರ ಆರಂಭಿಸಿದ್ದೇವೆ. ರಬ್ಬರ್ ಬೆಳೆಗಾರರು ಇಲ್ಲಿ ರಬ್ಬರ್ ಮಾರಾಟ ಮಾಡಬಹುದಾಗಿದೆ.ರಬ್ಬರ್ ಬೆಳೆಗಾರರಿಗೆ ಬೇಕಾದ ಉಪಕರಣಗಳು, ರಾಸಾಯನಿಕಗಳೂ ಇಲ್ಲಿ ಸಿಗಲಿದೆ. ಅಡಿಕೆ ಬೆಳೆಗಾರರು, ಕೃಷಿಕರಿಗೆ ಬೇಕಾದ ಮೈಲುತುತ್ತು ಹಾಗೂ ಇತರೇ ಸಲಕರಣೆಗಳೂ ಲಭ್ಯವಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು. ಸಂಘವು ರಬ್ಬರ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ರಬ್ಬರ್ ಬೆಳೆಗಾರರ ಹಿತ ಕಾಪಾಡಲು ಬದ್ಧವಾಗಿದೆ. ಸಂಘವು ಕಚ್ಚಾ ರಬ್ಬರ್ ಖರೀದಿ ಜೊತೆಗೆ ರಬ್ಬರ್ ಕೃಷಿ ಸಾಮಾಗ್ರಿಗಳ, ರಾಸಾಯನಿಕಗಳ ಮಾರಾಟ, ಕಡಿಮೆ ಬಡ್ಡಿಯಲ್ಲಿ ಚಿನ್ನಾಭರಣ ಈಡಿನ ಸಾಲ ಸೌಲಭ್ಯ, ರಬ್ಬರ್ ರೋಲರ್ ಖರೀದಿಗೆ ಸಾಲ, ಆಕರ್ಷಕ ಬಡ್ಡಿದರದಲ್ಲಿ ಅವಧಿ ಠೇವಣಿ ಸ್ವೀಕಾರ, ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನೂ ನೀಡುತ್ತಿದೆ. ಸದಸ್ಯರು ಇದರ ಪ್ರಯೋಜನ ಪಡೆದುಕೊಂಡು ಸಂಘ ಇನ್ನಷ್ಟೂ ಪ್ರಗತಿಗೆ ಕಾರಣರಾಗಬೇಕೆಂದು ಹೇಳಿದರು.

ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರುಗಳಾದ ಜಾರ್ಜ್‌ಕುಟ್ಟಿ ಉಪದೇಶಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್, ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲ್ಯಾನ್, ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ನಿರ್ದೇಶಕ ಜಯಾನಂದ ಬಂಟ್ರಿಯಾಲ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ದೋಂತಿಲ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ, ಕೌಕ್ರಾಡಿ ಗ್ರಾ.ಪಂ.ಸದಸ್ಯ ದಿನೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಮಾಲಕ ಸುಬ್ರಹ್ಮಣ್ಯ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ನೆಲ್ಯಾಡಿ ಜೈನ್ ಆಯಿಲ್ ಮಿಲ್‌ನ ಸಂತೋಷ್ ಜೈನ್, ರವಿಪ್ರಸಾದ್ ಆಚಾರ್ಯ, ಕೀರ್ತನ್‌ಕುಮಾರ್, ಮ್ಯಾಥ್ಯು ವಿ.ಜೆ.ಕೊಕ್ಕಡ, ಸಾಬು ಜೋರ್ಜ್ ನೆಲ್ಯಾಡಿ, ಉಪಖರೀದಿ ಕೇಂದ್ರದ ವ್ಯವಸ್ಥಾಪಕ ಆದರ್ಶ ಕೆ.ಯು.ಎಂಜಿರ, ಸಂಘದ ಸಿಬ್ಬಂದಿಗಳಾದ ನಿಶ್ಮಿತಾ ಪಡ್ಡಡ್ಕ, ಸ್ವಾತಿ ನೀರಕಟ್ಟೆ, ಗಣೇಶ್ ಪರಾರಿ ಕೊಲ್ಯೊಟ್ಟು, ವಾಣಿ ನೀರಕಟ್ಟೆ, ರಮಾದೇವಿ ಹೊಸಮಜಲು, ವನಿತಾ ಪುತ್ಯೆ, ರುಕ್ಮಯ ಗೌಡ ಕೊಕ್ಕಡ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ.ಕೆ,ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

—ಜಾಹೀರಾತು—

Leave a Reply

error: Content is protected !!