ಹಿಜಾಬ್-ಕೇಸರಿ ಸಂಘರ್ಷ: ಸೋಮವಾರದಿಂದ ಎರಡು ಹಂತದಲ್ಲಿ ಶಾಲಾ-ಕಾಲೇಜು ಆರಂಭ

ಶೇರ್ ಮಾಡಿ

ನೇಸರ ಫೆ.10:ಹಿಜಾಬ್, ಕೇಸರಿ ಸಂಘರ್ಷದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಸರಕಾರ ರಜೆ ಘೋಷಣೆ ಮಾಡಿತ್ತು.ಇದೀಗ ಸೋಮವಾರದಿಂದ ಹೈಸ್ಕೂಲ್ ಆರಂಭಕ್ಕೆ ಸರಕಾರ ನಿರ್ಧಾರ ಮಾಡಿದೆ.
ಮುಂದುವರೆದು ಪಿಯುಸಿ ಕಾಲೇಜುಗಳು ಹಾಗೂ ಡಿಗ್ರಿ ಕಾಲೇಜುಗಳನ್ನು 2ನೇ ಹಂತದಲ್ಲಿ ಪರಿಸ್ಥಿತಿ ನೋಡಿಕೊಂಡು ತೆರೆಯಲು ನಿರ್ಧಾರ ತೆಗೆದು ಕೊಳ್ಳ ಲಾಗುವುದು ಎಂದು
ಈ ಕುರಿತಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಹಿಜಾಬ್ ವಿವಾದ ಸಿಂಗಲ್ ಜಡ್ಜ್ ಮುಂದೆ ವಿಚಾರಣೆ ಬಂದಿತ್ತು.‌ ಇದೀಗ ತ್ರಿ ಸದಸ್ಯ ಪೀಠದ ಮುಂದೆ ಇವತ್ತು ವಿಚಾರಣೆಯಾಗಿದೆ. ತ್ರಿಸದಸ್ಯ ಪೀಠ ನಿರ್ದೇಶನವನ್ನ ಕೊಟ್ಟಿದೆ. ಪ್ರತಿದಿನವೂ ನಾವು ವಿಚಾರಣೆ ಮಾಡ್ತೇವೆ ಎಂದು. ಅಲ್ಲಿಯವರೆಗೆ ಗೊಂದಲ ಬೇಡವೆಂದಿದೆ ಎಂದು ತಿಳಿಸಿದರು.
ಶಾಲೆ,ಕಾಲೇಜು ಆವರಣದಲ್ಲಿ ಶಾಂತಿ‌ ನೆಲಸಬೇಕು. ಕಾನೂನು‌ಸುವ್ಯವಸ್ಥೆ ಮಾಮೂಲಿಯಾಗಬೇಕು.ಆ ನಿಟ್ಟಿನಲ್ಲಿ ಇವತ್ತು ಸಭೆ ಮಾಡಿದ್ದೇನೆ. 10ನೇ ತರಗತಿ ವರೆಗೆ ಶಾಲೆ ಪ್ರಾರಂಭವಾಗುತ್ತವೆ. ನಂತರ ಪಿಯುಸಿ ನಂತರ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಶುಕ್ರವಾರ ಎಲ್ಲಾ ಡಿಸಿ,ಎಸ್ಪಿ ಸಭೆ ಮಾಡುತ್ತೇನೆ.ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತೇನೆ. ಜಿಲ್ಲೆಗಳಲ್ಲಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯುತ್ತೇನೆ. ಶಿಕ್ಷಣ, ಹೋಂ ಡಿಪಾರ್ಟ್‌ಮೆಂಟ್ ಜೊತೆ ಸಭೆ ಮಾಡ್ತೇನೆ. ಪೋಷಕರು ಹಾಗೂ ಶಿಕ್ಷಕರ ಜೊತೆ ನಮ್ಮ‌ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಮನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Leave a Reply

error: Content is protected !!