ಸುಳ್ಯ: ಗಾಂಧಿನಗರದ ಏರ್‌ಟೆಲ್ ಮಳಿಗೆಗೆ ಕರೆನ್ಸಿ ರಿಚಾರ್ಚ್‌ಗೆಂದು ಬಂದ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ಯುವತಿಯ ಮನೆಯವರು ಪೊಲೀಸ್‌ಗೆ ದೂರು ನೀಡಿದ ಘಟನೆ ಸೋಮವಾರ ನಡೆದಿದೆ.
ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ಮೊಬೈಲ್ ರಿಚಾರ್ಜ್‌ಗೆ ಬಂದ ಸಂದರ್ಭ ಕುಳಿತುಕೊಳ್ಳುವಂತೆ ಹೇಳಿದ ಯುವಕ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದನು. ಇದನ್ನು ಗಮನಿಸಿದ ಯುವತಿ ಆಕ್ಷೇಪಿಸಿರುವುದಲ್ಲದೆ ಆತನ ಮೊಬೈಲನ್ನು ಕಸಿದು ನೋಡಿದಾಗ ತನ್ನ ಫೋಟೋ ಇರುವುದನ್ನು ನೋಡಿ ಗಾಬರಿಯಿಂದ ಅದನ್ನು ಡಿಲೀಟ್ ಮಾಡಿದ್ದಾಳೆ. ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ.
ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.