
ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ ನ ಏಳು ದಿನಗಳ ವಾರ್ಷಿಕ ಹಬ್ಬದಂದು ಪ್ರತಿ ವರ್ಷ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಿದವರಿಗೆ ಕೊಡ ಮಾಡುವ ಜೋರ್ಜಿಯನ್ ಪುರಸ್ಕಾರವನ್ನು ದ.ಕ. ಮತ್ತು ಉಡುಪಿ ಜಿಲ್ಲೆಯ ಲೋಕಾಯುಕ್ತ ಎಸ್.ಪಿ. ಸೈಮನ್ ಸಿ.ಎ ಅವರಿಗೆ ಪ್ರಧಾನ ಮಾಡಲಾಯಿತು.
ಚರ್ಚ್ ನ ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್, ವಿವಿಧ ಚರ್ಚ್ ನ ಧರ್ಮ ಗುರುಗಳು, ಟ್ರಸ್ಟಿ ಜೋನ್ ಎಬ್ರಹಾಂ, ಚೀರಮಟ್ಟಂ, ಕಾರ್ಯದರ್ಶಿ ವಿ.ಎನ್.ಚಾಕೋ., ಆಡಳಿತ ಮಂಡಳಿ ಸದಸ್ಯರುಗಳಾದ ಮೇಹಿ ಜಾರ್ಜ್, ರೋಯಿ.ಪಿ.ಜಿ., ಕುರಿಯಾಕೋಸ್.ಟಿ.ಕೆ., ಟಿ.ಜೆ.ವರ್ಗೀಸ್, ಜಾನ್ಸನ್.ಸಿ.ಕೆ., ಜೋಜಿ ತೋಮಸ್,, ಟಿ.ವಿ.ತೋಮಸ್, ಅಬ್ರಹಂ.ಟಿ.ಎಂ., ಬಾಜಿ ಜೋಸೆಫ್, ಲೆಕ್ಕ ಪರಿಶೋಧಕರಾದ ಪಿ.ಸಿ.ಪೌಲೋಸ್ ಉಪಸ್ಥಿತರಿದ್ದರು.
ದೇವಾಲಯದ ವಾರ್ಷಿಕ ಹಬ್ಬದ ಅಂಗವಾಗಿ ಮೇ.1 ರಿಂದ ಮೇ.7ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.
ಎಸ್.ಪಿ. ಸೈಮನ್ ಸಿ.ಎ ಅವರು ಉಪ್ಪಿನಂಗಡಿಯ ನಿವಾಸಿ, ಪುತ್ತೂರು ಫಿಲೋಮಿನಾ ಕಾಲೇಜು ಹಾಗೂ ಮಂಗಳೂರಿನ ಎಸ್ ಡಿ ಎಮ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಗಿಸಿ 2011ರಲ್ಲಿ ಸಿಐಡಿ ಯಲ್ಲಿ ಪೋಲಿಸ್ ಸಬ್ ಇನ್ಸ್ ಫೆಕ್ಟರ್ ಆಗಿ ನೇಮಕಗೊಂಡರು. ಇವರ ಉತ್ತಮ ಸೇವೆಗಾಗಿ 2011ರಲ್ಲಿ ಮುಖ್ಯಮಂತ್ರಿಗಳಿಂದ ಸ್ವರ್ಣ ಪದಕವನ್ನು ಪಡೆದಿದ್ದಾರೆ. 2019 ರಲ್ಲಿ ಎಸ್ ಪಿ ಆಗಿ ಪದನೋನ್ನತಿಯನ್ನು ಪಡೆದ ಇವರು ಇಲಾಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಇವರು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಲೋಕಾಯುಕ್ತ ಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.






