ಕೊಕ್ಕಡ: ವಿಕಲಚೇತನರ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ನವೀಕರಣ ಶಿಬಿರ

ಶೇರ್ ಮಾಡಿ

ನೇಸರ ಫೆ.12: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ವೆನ್ಲಾಕ್ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಮಂಗಳೂರು, ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳ್ತಂಗಡಿ ತಾಲೂಕು ಪಂಚಾಯತ್, ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಗ್ರಾಮೀಣ-ನಗರ ಪುನರ್ವಸತಿ ಕಾರ್ಯಕರ್ತರು ಇವರುಗಳ ಸಹಯೋಗದಲ್ಲಿ ತಾಲೂಕಿನ ಎಲ್ಲಾ ವಿಕಲಚೇತನರ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ನವೀಕರಣ ಶಿಬಿರ ಯಶಸ್ವಿಯಾಗಿ ಫೆ.10 ರಂದು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಶಿಬಿರದಲ್ಲಿ ತಾಲೂಕಿನ ಮಾನಸಿಕ ಹಾಗೂ ಬುದ್ಧಿಮಾಂದ್ಯ ವಿಕಲಚೇತನರು-48, ವಿಕಲಚೇತನರು-95, ವಾಕ್ ಮತ್ತು ಶ್ರವಣ ದೋಷವಿರುವ-46, ದೃಷ್ಟಿದೋಷವಿರುವ-34, ಒಟ್ಟು 223 ಮಂದಿ ವಿಕಲಚೇತನರಿಗೆ ಗುರುತಿನ ಚೀಟಿ ನವೀಕರಣ ಮಾಡಸಲಾಯಿತು ಹಾಗೂ 5 ಮಂದಿ ಹೊಸ ವಿಕಲಚೇತನರನ್ನು ಗುರುತಿಸಿ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಯಿತು.

ಕೋರಿ ಜಾತ್ರೆ :ವೀಕ್ಷಿಸಿ, Subscribers ಮಾಡಿ

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು,ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್.ಕೆ,ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ.ಬಿ, ಕೊಕ್ಕಡ ಪಂಚಾಯತ್ ಅಧ್ಯಕ್ಷ ಯೋಗೀಶ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್.ಎಂ, ತಾಲೂಕು ವಿಕಲಚೇತನರ ಮೇಲ್ವಿಚಾರಕ ಜೋನ್ ಬ್ಯಾಪ್ಟಿಸ್ಟ್ ,ವೆನ್ಲಾಕ್ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕಿನ ವೈದ್ಯರ ತಂಡ, ಗ್ರಾಮೀಣ-ನಗರ ಪುನರ್ವಸತಿ ಕಾರ್ಯಕರ್ತರು,ಎಲ್ಲಾ ವಿಕಲಚೇತನರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದುಕೊಂಡರು.

–ಜಾಹೀರಾತು–

Leave a Reply

error: Content is protected !!