ನೇಸರ ಫೆ.13: ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರದಿಂದ ಪ್ರಾರಂಭವಾಗಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಜಂಟಿ ಸದನ ಉದ್ದೇಶಿಸಿ ಸೋಮವಾರ ಭಾಷಣ ಮಾಡಲಿದ್ದಾರೆ. ಇದರ ಮಧ್ಯೆ ಹಿಜಾಬ್ V/S ಕೇಸರಿ ಸಂಘರ್ಷ ಸೇರಿದಂತೆ ಹಲವಾರು ವಿಚಾರ ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ.
ವರ್ಷದ ಪ್ರಥಮ ಅಧಿವೇಶನದ ಮೊದಲ ದಿನ ಉಭಯ ಸದನಗಳ ಸದಸ್ಯರ ಸಮ್ಮುಖ ರಾಜ್ಯಪಾಲರು ಭಾಷಣ ಮಾಡುವುದು ಸಂಪ್ರದಾಯ. ಅದರಂತೆ ರಾಜ್ಯಪಾಲರು ಸೋಮವಾರ ಭಾಷಣ ಮಾಡುತ್ತಾರೆ. ಬಳಿಕ ಫೆಬ್ರವರಿ 25 ರವರೆಗೆ ವಿಧಾನಮಂಡಲ ಕಲಾಪ ನಡೆಯಲಿದೆ. ಈ ಅವಧಿಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆಯಾಗಲಿದೆ. ಇದೇ ಸಂದರ್ಭ ಬಳಸಿಕೊಂಡು ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬೀಳುವುದು ನಿಶ್ಚಿತವಾಗಿದೆ.
—ಜಾಹೀರಾತು—