ನೆಲ್ಯಾಡಿ: ಗೋಳಿತಟ್ಟು ಶಾಲೆಯಲ್ಲಿ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮುಂಭಾಗದ ಬೀದಿಯಲ್ಲಿ ಮೆರವಣಿಗೆ ನಡೆಯಿತು.
ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಯಿತು. ವಿಶೇಷವಾಗಿ ಎಲ್ ಕೆ ಜಿ ಮತ್ತು ಯು ಕೆ ಜಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಯಿತು. ಪೋಷಕರ ಸಭೆ ನಡೆಸಿ ವಿವಿಧ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಬಿ.ಎಂ ಸ್ವಾಗತಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲ ಗೌಡ ಶಾಲಾ ಭೌತಿಕ ವಿಚಾರಗಳ ಬಗ್ಗೆ ಮಾತನಾಡಿ ಶುಭ ಕೋರಿದರು. ಉಪಾಧ್ಯಕ್ಷೆ ಹಸೀನಾ ಪರ್ವಿಂತಾಜ್ ಮತ್ತು ಗ್ರಾ.ಪಂ. ಮಾಜಿ ಸದಸ್ಯ ನೋಣಯ್ಯ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಜಾನ್ ಕೆ.ಪಿ, ತೇಜಸ್ವಿ.ಕೆ, ಅಬ್ದುಲ್ ಲತೀಫ್.ಸಿ, ಮನ್ವಿತ.ಡಿ ಮತ್ತು ಯಶಸ್ವಿನಿ ಉಪಸ್ಥಿತರಿದ್ದರು.