ನೆಲ್ಯಾಡಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಾತೃವಂದನ, ಮಾತೃ ಪೂಜನಾ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಪತಂಜಲಿ ಯೋಗ ಶಿಕ್ಷಣ ಸಮಿತಿ ನೆಲ್ಯಾಡಿ ಶಬರೀಶ ಶಾಖೆ ಮಾತೃ ಭೋಜನ ಮಾತೃ ವಂದನ ಮಾತೃ ಭೋಜನ ಕಾರ್ಯಕ್ರಮ ನೆಲ್ಯಾಡಿ ಶಬರೀಶ ಸಭಾಭವನದಲ್ಲಿ ನಡೆಯಿತು.

ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಲಕ್ಷೀ೬ ನಾರಾಯಣ ನವರು ಮಾತನಾಡಿ ತಾಯಿಯ ಮಹತ್ವವನ್ನು ತಿಳಿಸಿ ಜಗತ್ತಿನಲ್ಲಿ ತಾಯಿಯನ್ನು ದೇವರ ರೂಪದಲ್ಲಿ ಕರುಣಿಸಿದ್ದಾನೆ. ನಮಗೆ ಜೀವನದಲ್ಲಿ ಇಂತಹ ತಾಯಿಯೇ ಬೇಕೆಂದು ಆಯ್ಕೆ ಮಾಡಲು ಅವಕಾಶಗಳು ಇಲ್ಲ ಆದರೆ ತಾಯಿಯನ್ನು ದೇವರ ರೂಪದಲ್ಲಿ ನಮಗೆ ಕಾಣಲು ಸಾಧ್ಯವಿದೆ ಎಂದು ತಿಳಿಸಿ ದಿನಾಲೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ದಿನಾಲೂ ಯೋಗಭ್ಯಾಸದಲ್ಲಿ ವಿವಿಧ ಶಾಖೆಗಳ ಮೂಲಕ ತೊಡಗಿಸಿಕೊಳ್ಳುತ್ತಿದ್ದಾರೆ. ಯೋಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸಬೇಕು. ನಾವೆಲ್ಲರೂ ದೇಹದ ಅಂಗಗವನ್ನು ಪ್ರದರ್ಶಿಸುವ ಡ್ರೇಸ್ ಗಳನ್ನು ಅಳವಡಿಸಿಕೊಳ್ಳದೇ ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಗಾಣಿಗ ಸಮುದಾಯ ಭವನದ ಯೋಗ ಶಿಕ್ಷಕಿ ಶಶಿ ವಹಿಸಿದ್ದರು. ಅತಿಥಿಗಳಾಗಿ ಎ.ಎನ್.ಎಂ ಕಾಲೇಜ್ ನ‌ ನಿವೃತ್ತ ಪ್ರಾಂಶುಪಾಲರಾದ ಮೀನಾಕ್ಷಿ ಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಶಾಖೆಯ ಸಂಚಾಲಕ ರವಿಚಂದ್ರ ಹೊಸವಕ್ಲು, ಯೋಗಬಂಧುಗಳಾದ ಡಾ.ಅನಿಶ್, ರಾಮಕೃಷ್ಣ, ಹೇಮಾವತಿ, ಶೀನಪ್ಪ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸುಧಾರವರು ಪ್ರಾರ್ಥನೆ ನೆರವೇರಿಸಿದರು, ಹೇಮಾವತಿ ಸ್ವಾಗತಿಸಿದರು, ಶುಭಲಕ್ಷ್ಮಿ, ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು, ಸುಲತಾ ವಂದಿಸಿದರು.

Leave a Reply

error: Content is protected !!