ವಿಟ್ಲ: ಭಾರತೀಯ ಸಂಸ್ಕೃತಿಯನ್ನು, ಈ ದೇಶವನ್ನು, ಧರ್ಮವನ್ನು ಕಾಪಾಡಬೇಕು. ಇದಕ್ಕಾಗಿ ಎಲ್ಲರೂ ಒಟ್ಟಾಗಿ ವೈವಿದ್ಯವನ್ನು ಜೋಡಿಸಿಕೊಂಡು ಒಂದಾಗಿ ಕೆಲಸ ಮಾಡಬೇಕಾಗಿದೆ. ದೇಶದ ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆ ಹಾಗೂ ಸಂಘಟನೆ ಮಾಡಬೇಕೆಂಬ ಉದ್ದೇಶದಿಂದ ಸೌಹಾರ್ದ ಭೇಟಿಯನ್ನು ಮಾಡುತ್ತಿದ್ದೇವೆ ಎಂದು ಹರಿಹರಪುರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ಬೇಟಿ ನೀಡಿ ದತ್ತಾಂಜನೇಯ ದೇವರ ದರ್ಶನ ಮಾಡಿ, ಗೌರವ ಸ್ವೀಕಾರ ಮಾಡಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜದಲ್ಲಿ ಆಗುತ್ತಿರುವ ತೊಂದರೆಗಳಿಗೆ ವ್ಯಕ್ತಿವಿಕಾಸ ಆಗದಿರುವುದೇ ಸಮಸ್ಯೆಯಾಗಿದೆ. ಸಾದು ಸಂತರಿಗೆ ಸಮಾಜದ ಮೇಲಿನ ಜವಾಬ್ದಾರಿಯಿದೆ. ವ್ಯಕ್ತಿ ವಿಕಾಸದಲ್ಲಿ ಸಂಸ್ಕೃತಿಯ ಪಾತ್ರ ಹಾಗೂ ವಿಶ್ವಮಾನವ ಧರ್ಮದ ಪರಿಕಲ್ಪನೆ ಜನರಲ್ಲಿ ಮೂಡಿಸುವ ಕುರಿತಾಗಿ ಚಿಂತನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಒಡಿಯೂರು ಶ್ರೀ ವಿವಿಧೋದ್ದೇಶಾ ಸೌಹಾರ್ಧ ಸಹಕಾರಿ ಅಧ್ಯಕ್ಷ ಸುರೇಶ್ ರೈ, ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಗುರುದೇವದ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಗುರುದೇವಾ ವಿದ್ಯಾ ಪೀಠದ ಸಂಆಲಕ ಸೇರಾಜೆ ಗಣಪತಿ ಭಟ್, ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ, ಐಟಿಐ ಪ್ರಾಂಶುಪಾಲ ಪ್ರವೀಣ್ ಕುಮಾರ್, ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ, ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ, ಯೋಜನೆಯ ಸೇವಾ ಧೀಕ್ಷಿತರು, ಸಂಯೋಜಕರು, ಮೇಲ್ವಿಚಾರಕರು, ಯೋಜನೆಯ ಬಂಧು ಗಳು, ಗುರುದೇವದ ಸೇವಾ ಬಳಗದ ಸದಸ್ಯರು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸದಸ್ಯರು, ಸಹಕಾರಿಯ ನಿರ್ದೇಶಕರು, ಐಟಿಐ ತರಬೇತುದಾರರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.