ಕಡಬ ಸರಸ್ವತೀ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳ ಪ್ರವೇಶೋತ್ಸವವು ಕೇವಳ ಹನುಮಾನ್ ನಗರದ ಸಂಸ್ಥೆಯಲ್ಲಿ ದೀಪ ಬೆಳಗುವುದರೊಂದಿಗೆ ಪ್ರಾರಂಭವಾಯಿತು.
ದೀಪ ಪ್ರಜ್ವಲನಗೊಳಿಸಿ ಮಾತನಾಡಿದ ತೆಕ್ಕಡ್ಕ ನಾರಾಯಣ ಭಟ್ ರವರು, ಸುಮಾರು 20 ವರ್ಷಗಳ ಆಂಗ್ಲ ಮಾಧ್ಯಮ ಶಿಕ್ಷಣದ ಕನಸು ಇಂದು ಪೂರ್ಣವಾಯಿತು. ಸಂಸ್ಕಾರಯುತ ಶಿಕ್ಷಣ ಬುನಾದಿಯಿಂದ ಪ್ರಾರಂಭವಾಗಬೇಕು. ಪುಟಾಣಿಗಳು ದೇಶದ ಅತ್ಯುನ್ನತ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು. ಭಾರತ ಮಾತೆಗೆ ನಮಿಸಿದ ಪುಟಾಣಿಗಳನ್ನು ಶಿಕ್ಷಕರು ಆರತಿ ಬೆಳಗಿಸಿ, ಸಿಹಿ ನೀಡುವುದರೊಂದಿಗೆ ತರಗತಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಅಚ್ಚುತ ಪ್ರಭು, ಉದ್ಯಮಿಗಳು ಕಡಬ, ರವಿರಾಜ್ ಶೆಟ್ಟಿ, ಅಧ್ಯಕ್ಷರು ಸರಸ್ವತಿ ವಿದ್ಯಾಸಂಸ್ಥೆಗಳು ಕಡಬ, ವೆಂಕಟ್ರಮಣ ರಾವ್ ಮಂಕುಡೆ, ಸಂಚಾಲಕರು ಸರಸ್ವತಿ ವಿದ್ಯಾ ಸಂಸ್ಥೆಗಳುn ಆಡಳಿತ ಮಂಡಳಿಯ ಸದಸ್ಯರುಗಳಾದ ಲಿಂಗಪ್ಪ ಜೆ, ಕೃಷ್ಣ ಶೆಟ್ಟಿ, ಸೀತಾರಾಮ ಎ, ಉಮೇಶ್ ಶೆಟ್ಟಿ ಸಾಯಿರಾಂ, ಪುಲಸ್ತ್ಯ ರೈ, ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕಿ ಕುಮಾರಿ ಶ್ವೇತಾ ಕೋಡಿಂಬಾಳ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.