ನೆಲ್ಯಾಡಿ: ಹದಿಹರೆಯದ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ

ನೆಲ್ಯಾಡಿ: ಉಪ್ಪಿನಂಗಡಿ ಆರಕ್ಷಕ ಠಾಣೆಯ ವತಿಯಿಂದ ನೆಲ್ಯಾಡಿ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಹದಿಹರೆಯದ ವಿದ್ಯಾರ್ಥಿಗಳಿಗೆ ಜಾಗೃತಿ ಮಾಹಿತಿ ಕಾರ್ಯಕ್ರಮ ಜೂ.12ರಂದು ನಡೆಯಿತು.

ವಿದ್ಯಾರ್ಥಿಗಳಿಗೆ ದ್ವಿಚಕ್ರ ಚಲಾವಣೆಯಿಂದ ಆಗಬಹುದಾದ ಅನಾಹುತ, ಲೈಂಗಿಕ ತೊಂದರೆಯ ಬಗ್ಗೆ ಎಚ್ಚರಿಕೆ ಹಾಗೂ ಮಾದಕ ಜಾಲಗಳ ಹಿಡಿತದಿಂದ ಮಕ್ಕಳು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು, ಮಕ್ಕಳಿಗೆ ತೊಂದರೆಯಾದಾಗ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಇದರ ಸಹಾಯದಿಂದ ಹೇಗೆ ರಕ್ಷಣೆಯನ್ನು ಪಡೆಯಬಹುದು ಅಲ್ಲದೆ ಸೋಶಿಯಲ್ ಮೀಡಿಯಾಗಳ ಮೂಲಕ ಪರಿಚಯವಿಲ್ಲದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೆಕ್ಸ್ ಜಾಲಕ್ಕೆ ಹಾಗೂ ಮಾದಕ ವಸ್ತುಗಳ ಜಾಲಕ್ಕೆ ಸಿಕ್ಕಿಕೊಂಡರೆ ಹೊರಬರಲು ಸಾಧ್ಯವಿಲ್ಲವೆಂಬುದನ್ನು ವಿವರಿಸುವುದೊಂದಿಗೆ ಇಂತಹ ತಪ್ಪು ಮಾಡದೆ ವಿದ್ಯಾಭ್ಯಾಸದತ್ತ ತಮ್ಮ ಗಮನವನ್ನು ಹರಿಸಬೇಕು ಇಂತಹ ತಪ್ಪುಗಳಿಗೆ ಸಿಕ್ಕಿ ಹಾಕುವುದು 18 ವರ್ಷದ ಒಳಗಿನ ಮಕ್ಕಳು ಆದುದರಿಂದ ಇಂತಹ ತಪ್ಪಿಗೆ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸಿ ಜಾಗೃತರಾಗಬೇಕೆಂದು ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ಅವಿನಾಶ್.ಎಚ್ ಗೌಡ ಮಾಹಿತಿಯನ್ನು ನೀಡಿದರು

ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ, ಪ್ರಾಂಶುಪಾಲರಾದ ರೇ.ಫಾ.ವರ್ಗೀಸ್ ಕೈಪನಡ್ಕ, ಉಪಪ್ರಾಂಶುಪಾಲರಾದ ಜೋಸ್.ಎಂ.ಜೆ., ಉಪಸ್ಥಿತರಿದ್ದರು.

ಶಿಕ್ಷಕಿ ಅಕ್ಷತಾ ಸ್ವಾಗತಿಸಿದರು, ಏಂಜೆಲ್ ವಂದಿಸಿದರು

Leave a Reply

error: Content is protected !!