ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ಗುಣಾತ್ಮಕವಾದ ಶಿಕ್ಷಣವನ್ನು ಕಲಿಕಾ ವಾತಾವರಣದೊಂದಿಗೆ ಶಿಕ್ಷಕರು ಅತ್ಯುತ್ತಮ ಪಾತ್ರವನ್ನು ವಹಿಸುತ್ತಿದ್ದಾರೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನು ನಮ್ಮ ಸಂಸ್ಥೆಯಲ್ಲಿ ಮಾಡಲಾಗಿದೆ ಎಂದು ಪ್ರಾಂಶುಪಾಲರಾದ ರೇ.ಫಾ.ವರ್ಗೀಸ್ ಕೈಪನಡ್ಕ ಅವರು ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಶಾಲಾ ಪುನಾರಾರಂಭ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಸಂಚಾಲಕರಾದ ರೇ.ಫಾ.ಜೈಸನ್ ಸೈಮನ್ ಒಐಸಿ, ಉಪಪ್ರಾಂಶುಪಾಲರಾದ ರೇ.ಫಾ.ಜೋಸ್.ಎಂ.ಜೆ., ಮುಖ್ಯೋಪಾಧ್ಯಾಯರಾದ ಜಾರ್ಜ್.ಕೆ ತೋಮಸ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಗೆಸ್ಸಿ ಜೋಸೆಫ್ ಉಪಸ್ಥಿತರಿದ್ದರು.
ಸ್ವೀನಲ್ ವೆಲೆನ್ಸ್ ಪಿರೇರಾ, ರಶ್ಮಿ.ಕೆ, ಅಬಿಸ್ಟ್, ಕೆಲ್ವಿನ್ ಶೆರ್ ಲೋಕ್ ಡಿಸೋಜಾ, ಇಶಾನಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ವಿವಿದಾ ರೋಡ್ರಿಗಸ್ ಸ್ವಾಗತಿಸಿದರು, ಶಿಕ್ಷಕಿ ರೇಷ್ಮಾ ಡಿಸೋಜಾ ವಂದಿಸಿದರು.