ನೆಲ್ಯಾಡಿ: ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಶಾಲಾ ಸಂಸತ್ತು ಚುನಾವಣೆ ಹಾಗೂ ಪ್ರಮಾಣ ವಚನ ಸಮಾರಂಭ ನಡೆಯಿತು.
ಶಾಲಾ ನಾಯಕನಾಗಿ ಸೆಲ್ವಿನ್, ಉಪನಾಯಕನಾಗಿ ಭವಿಕ್ ಕುಮಾರ್, ಶಿಕ್ಷಣ ಮಂತ್ರಿಯಾಗಿ ಜಿಸ್ಮೋಳ್ ಬಿನೋಯ್, ಉಪಶಿಕ್ಷಣ ಮಂತ್ರಿಯಾಗಿ ಸಾಂಜೂ ವರ್ಗೀಸ್, ಗ್ರಂಥಾಲಯ ಮಂತ್ರಿಯಾಗಿ ಸಾನಿಕಾ ಎಸ್ ರಾವ್, ಉಪಗ್ರಂಥಾಲಯ ಮಂತ್ರಿಯಾಗಿ ಕೌಶಲ್, ಸಾಂಸ್ಕೃತಿಕ ಮಂತ್ರಿಯಾಗಿ ಸೋನಾ ಅನುರಾಜ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಧನ್ಯಶ್ರೀ, ಕ್ರೀಡಾ ಮಂತ್ರಿಯಾಗಿ ಹರ್ಷಲ್ ಜೆ.ಕೆ, ಉಪಕ್ರೀಡಾ ಮಂತ್ರಿಯಾಗಿ ಜಿಲ್ಬಿನ್ ಜೋಸ್, ಆರೋಗ್ಯ ಮಂತ್ರಿಯಾಗಿ ಮೇರಿ, ಉಪ ಆರೋಗ್ಯ ಮಂತ್ರಿಯಾಗಿ ನಿಖಿಲ್ ಪಿ.ಕೆ ಆಯ್ಕೆಯಾದರು.
ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್‌ರವರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಶಾಲಾ ಆಡಳಿತ ಅಧಿಕಾರಿ ಜಾನ್ ಕೆ.ಕೆ, ಮುಖ್ಯಗುರು ಯಶೋಧರ ಕೆ., ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.